ಥಟ್ಟಂತ ಮಾಡಿ ʼಬ್ರೆಡ್ ಹಲ್ವಾʼ

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಸಂಜೆ ಸಮಯದಲ್ಲಿ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ಮಾಡಿ ಈ ಬ್ರೆಡ್ ಹಲ್ವಾ.

ಒಂದು ಪ್ಯಾಕ್ ಬ್ರೆಡ್ ಮನೆಯಲ್ಲಿ ಇದ್ದರೆ ಆಯ್ತು. ಮಾಡುವುದಕ್ಕೂ ಸುಲಭ, ಮಕ್ಕಳೂ ಈ ಹೊಸ ರುಚಿಯನ್ನು ಇಷ್ಟಪಟ್ಟು ತಿನ್ನುತ್ತಾರೆ.

ಬೇಕಾಗುವ ಸಾಮಾಗ್ರಿಗಳು: 4 ಪೀಸ್ –ಬ್ರೇಡ್, 3 ಚಮಚದಷ್ಟು ತುಪ್ಪ, ½ ಕಪ್ ನೀರು, ¼ ಕಪ್-ಸಕ್ಕರೆ, ಗೋಡಂಬಿ-8.

ಮಾಡುವ ವಿಧಾನ: ಮೊದಲಿಗೆ ಬ್ರೇಡ್ ನ ಸುತ್ತಲಿರುವ ಕಂದು ಬಣ್ಣದ ಪಟ್ಟಿಯನ್ನು ತೆಗೆಯಿರಿ. ನಂತರ ಒಂದು ಪ್ಯಾನ್ ನಲ್ಲಿ 1 ಟೇಬಲ್ ಸ್ಪೂನ್ ನಷ್ಟು ತುಪ್ಪ ಹಾಕಿಕೊಂಡು ಗೋಡಂಬಿಯನ್ನು ಹುರಿದುಕೊಳ್ಳಿ.

ನಂತರ ಬ್ರೇಡ್ ಪೀಸ್ ಅನ್ನು ಪ್ಯಾನ್ ಗೆ ಹಾಕಿ ಎರಡೂ ಕಡೆ ಸರಿಯಾಗಿ ಟೋಸ್ಟ್ ಮಾಡಿ ಒಂದು ಪ್ಲೇಟ್ ಗೆ ಹಾಕಿಕೊಳ್ಳಿ. ನಂತರ ಅದೇ ಪ್ಯಾನ್ ಗೆ ಸಕ್ಕರೆಯನ್ನು ಹಾಕಿ ನೀರು ಸೇರಿಸಿ ಕುದಿಯಲು ಬಿಡಿ. ಇದು ಕುದಿಯಲು ಆರಂಭಿಸಿದಾಗ ಬ್ರೇಡ್ ಪೀಸ್ ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ತುಪ್ಪವನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ತುಪ್ಪ ತಳಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ರುಚಿಕರವಾದ ಬ್ರೆಡ್ ಹಲ್ವಾ ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read