ಆರೋಗ್ಯಕರವಾದ ‘ಪುದೀನಾ ಜ್ಯೂಸ್’ ಮಾಡಿ ಕುಡಿಯಿರಿ

ಜ್ಯೂಸ್ ಕುಡಿಬೇಕು ಅನಿಸ್ತಿದೆಯಾ…? ಹೊರಗಡೆಯಿಂದ ತಂದು ಕುಡಿಯುವುದಕ್ಕಿಂತ ಮನೆಯಲ್ಲಿ ಮಾಡಿ ಕುಡಿಯಿರಿ ಆರೋಗ್ಯಕರವಾದ ಪುದೀನಾ ಜ್ಯೂಸ್. ಮಾಡುವ ವಿಧಾನ ಕೂಡ ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:

ಪುದೀನಾ-1 ಕಪ್, ಲಿಂಬೆಹಣ್ಣಿನ ರಸ-1/4 ಕಪ್. ಕಾಳುಮೆಣಸಿನ ಪುಡಿ-1/4 ಟೀ ಸ್ಪೂನ್, ಉಪ್ಪು-1/4 ಟೀ ಸ್ಪೂನ್, ಸಕ್ಕರೆ-1 ಕಪ್, ಐಸ್ ಕ್ಯೂಬ್-1 ಕಪ್, ಕೋಲ್ಡ್ ನೀರು-2 ಗ್ಲಾಸ್.

ಮಾಡುವ ವಿಧಾನ:

ಒಂದು ಮಿಕ್ಸಿ ಜಾರಿಗೆ 1 ಕಪ್ ಪುದೀನಾ ಎಲೆ, ಲಿಂಬೆಹಣ್ಣಿನ ರಸ, ಕಾಳುಮೆಣಸಿನ ಪುಡಿ, ಉಪ್ಪು, ಸಕ್ಕರೆ, ಐಸ್ ಕ್ಯೂಬ್ಸ್, ಕೋಲ್ಡ್ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಸರ್ವ್ ಮಾಡುವ ಗ್ಲಾಸ್ ಗೆ 2 ಐಸ್ ಕ್ಯೂಬ್ಸ್ ಹಾಕಿ ಮಾಡಿಟ್ಟುಕೊಂಡ ಜ್ಯೂಸ್ ಹಾಕಿ ಇದರ ಮೇಲೆ 2 ಪುದೀನಾ ಎಲೆ ಇಟ್ಟು ಸರ್ವ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read