ʼವಿಘ್ನ ವಿನಾಶಕʼ ನ ಅಲಂಕಾರಕ್ಕೆ ವಿಭಿನ್ನ ಬಗೆಯ ಹಾರ

Ganesh Chaturthi | ಗಣೇಶ ಚತುರ್ಥಿ ಕೇವಲ ಒಂದು ಹಬ್ಬವಲ್ಲ : ಇದಕ್ಕೆ ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಧಾರ್ಮಿಕ ಹಿನ್ನಲೆಯಿದೆ - Bengaluru Wire

ವಿನಾಯಕ ಚತುರ್ಥಿ ಬಂತೆಂದರೆ ವಾರದ ಮೊದಲೇ ಹಬ್ಬದ ತಯಾರಿ ಶುರು. ಗಣೇಶನಿಗೆ ಇಷ್ಟವಾಗುವ ಎಲ್ಲಾ ಪದಾರ್ಥಗಳನ್ನು ಜೋಡಿಸುವುದೇ ಒಂದು ಸಂಭ್ರಮ.

ಇನ್ನೂ ಅಲಂಕಾರದಲ್ಲಿ ಇವೆಲ್ಲಾ ಮರೆಯದೇ ಸಿದ್ಧಪಡಿಸಿ, ಗಣಪತಿಯ ಪ್ರೀತಿಗೆ ಪಾತ್ರರಾಗಿ.

ಗರಿಕೆ ಹಾರ

ಡೊಳ್ಳು ಹೊಟ್ಟೆ ಗಣಪ ತಿಂಡಿಪೋತ. ಸಿಕ್ಕಾಪಟ್ಟೆ ತಿಂದು ಹೊಟ್ಟೆ ಕೆಡಿಸಿಕೊಂಡ ಗಣೇಶನಿಗೆ ಗರಿಕೆ ಔಷಧಿಯೇ ಸರಿ. ಔಷಧೀಯ ಗುಣಗಳನ್ನು ಹೊಂದಿರುವ ಗರಿಕೆ ಇವನಿಗೆ ಬಹಳ ಇಷ್ಟ. 21 ಗರಿಕೆಯನ್ನು ಪ್ರಥಮ ಪೂಜಿತನಿಗೆ ಅರ್ಪಿಸುವುದು ಗೊತ್ತೇ ಇದೆ. ಈ ಬಾರಿ ಗಣೇಶನಿಗೆ ಗರಿಕೆ ಹಾರ ಮಾಡಿ ಹಾಕಿ. ಗರಿಗೆಯ ಜೊತೆಗೆ ಸೇವಂತಿ, ಗುಲಾಬಿ ಹೂವುಗಳನ್ನು ಸೇರಿಸಿ ಆಕರ್ಷಕ ರೀತಿಯಲ್ಲಿ ಹಾರ ಕಟ್ಟಿ ಗಣೇಶನಿಗೆ ಹಾಕಿ.

ಕಡಲೇಕಾಳು ಹಾರ

ಗಣೇಶ ವಿಸರ್ಜನೆಯ ದಿನ ಕಡಲೇ ಉಸುಳಿ ಮಾಡೇ ಮಾಡುತ್ತಾರೆ. ಕಡಲೇ ಉಸುಳಿಲಿಯ ಜೊತೆಗೆ ಈ ಬಾರಿ ನೆನೆಸಿದ ಕಡಲೇ ಕಾಳನ್ನು ಪೋಣಿಸಿ ಹಾರ ಮಾಡಿ ವಿನಾಯಕನಿಗೆ ಅರ್ಪಿಸಬಹುದು.

ಎಕ್ಕೆಹೂವಿನ ಹಾರ

ಎಕ್ಕೆ ಗಿಡದಲ್ಲಿ ಸಾಕ್ಷಾತ್ ಗಣಪನೆ ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನ ಎಕ್ಕೆ ಹೂವಿನ ಹಾರ ತಪ್ಪದೇ ಸಮರ್ಪಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read