ಕೆಲವೊಮ್ಮೆ ವಾರದ ದಿನಗಳಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಅಡುಗೆ ಮಾಡಲು ಹೆಚ್ಚು ಶಕ್ತಿ ಇರುವುದಿಲ್ಲ. ಆದರೆ ಹೊಟ್ಟೆ ಮಾತ್ರ ಹಸಿವಿನಿಂದ ಕೂಗುತ್ತಿರುತ್ತದೆ. ಅಂತಹ ಸಮಯದಲ್ಲಿ ಬೇಗನೆ ತಯಾರಿಸಬಹುದಾದ, ಹೊಟ್ಟೆ ತುಂಬಿಸುವ ಮತ್ತು ರುಚಿಕರವಾದ ಭೋಜನದ ಆಸೆ ಎಲ್ಲರಿಗೂ ಇರುತ್ತದೆ.
ಆನ್‌ಲೈನ್‌ನಲ್ಲಿ (Online) ಆರ್ಡರ್ ಮಾಡುವ ಬದಲು ಮನೆಯಲ್ಲೇ ಏನಾದರೂ ವಿಶೇಷವಾದ ನಾನ್-ವೆಜ್ (Non-Veg) ತಿಂಡಿ ಮಾಡಬೇಕೆನಿಸಿದರೆ, ನಿಮಗಾಗಿ ಇಲ್ಲಿದೆ ಐದು ಬಗೆಯ ಪಲಾವ್ (Pulao) ಪಾಕವಿಧಾನಗಳು. ಇವುಗಳನ್ನು ಒಂದೇ ಪಾತ್ರೆಯಲ್ಲಿ ಕಡಿಮೆ ಸಮಯದಲ್ಲಿ ಮತ್ತು ಸುಲಭವಾಗಿ ತಯಾರಿಸಬಹುದು. ಬಿರಿಯಾನಿಯಂತೆ ಗಂಟೆಗಟ್ಟಲೆ ಮ್ಯಾರಿನೇಟ್ (Marinate) ಮಾಡುವ ಅಗತ್ಯವಿಲ್ಲ.
ನಿಮಗಾಗಿ 5 ರುಚಿಕರ ನಾನ್-ವೆಜ್ ಪಲಾವ್ ಪಾಕವಿಧಾನಗಳು:
- ಮಲೈ ಟಿಕ್ಕಾ ಪಲಾವ್ (Malai Tikka Pulao): ಟಿಕ್ಕಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಈ ಪಲಾವ್ ರೆಸಿಪಿಯಲ್ಲಿ ಕೆನೆಭರಿತ ಚಿಕನ್ ಮಲೈ ಟಿಕ್ಕಾ ತುಂಡುಗಳನ್ನು ಬಳಸಿ ರುಚಿಕರವಾದ ಪಲಾವ್ ಮಾಡಬಹುದು. ಮನೆಯಲ್ಲೇ ಈ ವಿಶಿಷ್ಟ ರುಚಿಯನ್ನು ಸವಿಯಬಹುದು.
- ಜಂಗ್ಲಿ ಪಲಾವ್ (Jungli Pulao): ಅನ್ನ, ಚಿಕನ್ (Chicken), ಮತ್ತು ವಿವಿಧ ರೀತಿಯ ತರಕಾರಿಗಳನ್ನು ಬಳಸಿ ಮನೆಯಲ್ಲಿ ತಯಾರಿಸಿದ ಮಸಾಲೆಯೊಂದಿಗೆ ಮಾಡುವ ಈ ಪಲಾವ್ ತಿನ್ನಲು ತುಂಬಾ ತೃಪ್ತಿದಾಯಕವಾಗಿರುತ್ತದೆ. ಎಲ್ಲವನ್ನೂ ಒಂದೇ ಪಾತ್ರೆಯಲ್ಲಿ ಹಾಕಿ ಬೇಯಿಸಿದರೆ ರುಚಿಯಾದ ಜಂಗ್ಲಿ ಪಲಾವ್ ಸಿದ್ಧ.
- ಚಿಕನ್ ಸೀಖ್ ಕಬಾಬ್ ಪಲಾವ್ (Chicken Seekh Kebab Pulao): ಇದು ಮತ್ತೊಂದು ರುಚಿಕರ ಮತ್ತು ಸರಳ ಪಲಾವ್ ರೆಸಿಪಿ. ಹೆಸರೇ ಹೇಳುವಂತೆ ಚಿಕನ್ ಸೀಖ್ ಕಬಾಬ್ (Chicken Seekh Kebab) ಮತ್ತು ಚಿಕನ್ ಪಲಾವ್ (Chicken Pulao) ಸೇರಿ ಈ ವಿಶೇಷ ರುಚಿ ಮೂಡುತ್ತದೆ. ಉಳಿದ ಸೀಖ್ ಕಬಾಬ್ ಕೂಡ ಬಳಸಬಹುದು.
- ಕಾಬುಲಿ ಮಟನ್ ಪಲಾವ್ (Kabuli Mutton Pulao): ಅಫ್ಘಾನಿಸ್ತಾನದ ಕಾಬುಲ್‌ನಿಂದ ಬಂದ ಈ ಪಲಾವ್‌ನಲ್ಲಿ ಮೃದುವಾದ ಮಟನ್ (Mutton), ಸಿಹಿ ರುಚಿಗಾಗಿ ಕ್ಯಾರೆಟ್ (Carrot) ಮತ್ತು ಒಣದ್ರಾಕ್ಷಿ ಹಾಗೂ ಪರಿಮಳಯುಕ್ತ ಸಂಬಾರ ಪದಾರ್ಥಗಳನ್ನು ಬಳಸಲಾಗುತ್ತದೆ. ತುಪ್ಪದ ಸುವಾಸನೆಯೊಂದಿಗೆ ಇದು ಅದ್ಭುತ ರುಚಿ ನೀಡುತ್ತದೆ.
- ಮೊಟ್ಟೆ ಕೀಮಾ ಪಲಾವ್ (Keema Pulao): ಇದು ಅತ್ಯಂತ ಸುಲಭವಾದ ಪಲಾವ್ ರೆಸಿಪಿ. ಸುವಾಸನೆಯುಕ್ತ ಸಂಬಾರ ಪದಾರ್ಥಗಳು, ತರಕಾರಿಗಳು ಮತ್ತು ಕೀಮಾ ಶೈಲಿಯ ಮೊಟ್ಟೆಯೊಂದಿಗೆ ಇದನ್ನು ತಯಾರಿಸಿದರೆ ಊಟಕ್ಕೆ ಬೇರೆ ಏನೂ ಬೇಡ.