ಮಾಡಿ ಸವಿಯಿರಿ ಗರಿಗರಿಯಾದ ʼಚೈನೀಸ್ʼ ಆಲೂ ಚಿಲ್ಲಿ ರೆಸಿಪಿ

ಆಲೂಗಡ್ಡೆಯಲ್ಲಿ ಏನೇ ತಯಾರಿಸಿದರೂ ಅದಕ್ಕೆ ರುಚಿ ಕಟ್ಟಿಟ್ಟ ಬುತ್ತಿ. ಅದರಲ್ಲೂ ಸಿಂಪಲ್ ಆಗಿ ತಕ್ಷಣ ತಯಾರಿಸಬಹುದಾದ ಆಲೂ ರೆಸಿಪಿಗಳು ಹತ್ತು ಹಲವಾರು. ಈ ಮಳೆಗಾಲದ ಕೆಲ ಸಂಜೆಗಳನ್ನು ಆಲೂ ಚಿಲ್ಲಿ ಮಾಡಿ ಸವಿಯಿರಿ.

ಬೇಕಾಗುವ ಸಾಮಾಗ್ರಿಗಳು

ಹಿಟ್ಟಿಗೆ

ಜೋಳದ ಹಿಟ್ಟು 1/4 ಕಪ್
ಮೈದಾ 1/4 ಕಪ್
ಕೆಂಪು ಮೆಣಸಿನ ಪುಡಿ 1 ಚಮಚ
ಮಧ್ಯಮ ಗಾತ್ರದ ಆಲೂಗಡ್ಡೆ 4
ಪೆಪ್ಪರ್
ಉಪ್ಪು ರುಚಿಗೆ ತಕ್ಕಷ್ಟು

ಸಾಸ್‌ ಗೆ

ಎಣ್ಣೆ 1 ಚಮಚ
ಈರುಳ್ಳಿ 1 ಸಣ್ಣಗೆ ಹೆಚ್ಚಿದ್ದು
ಬೆಳ್ಳುಳ್ಳಿ 4 ಸಣ್ಣಗೆ ಹೆಚ್ಚಿದ್ದು
ಸೋಯಾ ಸಾಸ್ 1 ಚಮಚ
ದೊಣ್ಣೆ ಮೆಣಸು 1/2 ಕಪ್ ಸಣ್ಣಗೆ ಹೆಚ್ಚಿದ್ದು
ಹಸಿರು ಚಿಲ್ಲಿ ಸಾಸ್ 1 ಚಮಚ
ಕೆಂಪು ಚಿಲ್ಲಿ ಸಾಸ್ 1 ಚಮಚ
ವಿನೆಗರ್ 2 ಚಮಚ
ಕೆಚಪ್ 2 ಚಮಚ
ಜೋಳದ ಹಿಟ್ಟು 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಚಿಲ್ಲಿ ಪೌಡರ್ 1 ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ

ಆಲೂಗಡ್ಡೆಗಳನ್ನು ಉದ್ದುದ್ದ ಹೋಳುಗಳಾಗಿ ಹೆಚ್ಚಿಕೊಳ್ಳಿ.  ಬಟ್ಟಲೊಂದರಲ್ಲಿ ಜೋಳದ ಹಿಟ್ಟು, ಮೈದಾ, ಪೆಪ್ಪರ್, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ನೀರು ಹಾಗೂ ಉಪ್ಪು ಸೇರಿಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ಆಲೂಗಡ್ಡೆ ಹೋಳುಗಳನ್ನು ಈ ಹಿಟ್ಟಿನಲ್ಲಿ ಮುಳುಗಿಸಿಡಿ.

ಈಗ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಳಿಕ, ಹಿಟ್ಟಿನಲ್ಲದ್ದಿದ ಆಲೂಗಡ್ಡೆಗಳನ್ನು ಮಧ್ಯಮ ಉರಿಯಲ್ಲಿ ಡೀಪ್ ಫ್ರೈ ಮಾಡಿ. ಗೋಲ್ಡನ್ ಬ್ರೌನ್‌ ಬಣ್ಣಕ್ಕೆ ತಿರುಗಿದ ಆಲೂವನ್ನು ತೆಗೆದಿಟ್ಟುಕೊಳ್ಳಿ.

ಸಾಸ್ ಮಾಡಲು ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಹಾಗೂ ಹೆಚ್ಚಿದ ಈರುಳ್ಳಿ ಹಾಕಿ. ಈರುಳ್ಳಿ ಕೆಂಪಗಾಗುವವರೆಗೆ ಚೆನ್ನಾಗಿ ಹುರಿಯಿರಿ. ಈಗ ಇದಕ್ಕೆ ದೊಣ್ಣೆ ಮೆಣಸು, ಕೆಂಪು ಚಿಲ್ಲಿ ಸಾಸ್, ಹಸಿರು ಚಿಲ್ಲಿ ಸಾಸ್, ಸೋಯಾ ಸಾಸ್, ಕೆಚಪ್ ಹಾಗೂ ವಿನೆಗರ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಜೋಳದ ಹಿಟ್ಟು ಹಾಗೂ ನೀರು ಸೇರಿಸಿ ಪೇಸ್ಟ್ ರೂಪದ ಮಿಶ್ರಣ ತಯಾರಿಸಿ ಬೇಯಲು ಬಿಡಿ.

ಸಾಸ್ ರೆಡಿಯಾದ ಬಳಿಕ ಎಣ್ಣೆಯಲ್ಲಿ ಕರಿದ ಆಲೂಗಡ್ಡೆಯನ್ನು ಸಾಸ್‌ನಲ್ಲಿ ಅದ್ದಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಗೂ ಚಿಲ್ಲಿ ಪೌಡರ್ ಉದುರಿಸಿ. ಈಗ ಗರಿಗರಿಯಾದ ಆಲೂ ಚಿಲ್ಲಿ ತಿನ್ನಲು ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read