ಆರೋಗ್ಯಕರವಾದ ʼಸಲಾಡ್ʼ ಮಾಡಿ ಸವಿಯಿರಿ

ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುವವರು ಒಮ್ಮೆ ಈ ಸಲಾಡ್ ಮಾಡಿಕೊಂಡು ಸವಿಯಿರಿ. ಹೊಟ್ಟೆ ತುಂಬುವುದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಈ ಸಲಾಡ್.

ಬೇಕಾಗುವ ಸಾಮಾಗ್ರಿಗಳು:

1 ಕಪ್ – ಮೊಳಕೆ ಬಂದ ಹೆಸರುಕಾಳು, ¼ ಕಪ್ – ಈರುಳ್ಳಿ ಸಣ್ಣಗೆ ಹಚ್ಚಿದ್ದು, ¼ ಕಪ್ – ಟೊಮೆಟೊ ಕತ್ತರಿಸಿದ್ದು, 1 ಟೀ ಸ್ಪೂನ್ – ಹಸಿಮೆಣಸು, ¼ ಕಪ್ – ಸೌತೆಕಾಯಿ ಪೀಸ್, ½ ಟೀ ಸ್ಪೂನ್ – ಬ್ಲ್ಯಾಕ್ ಸಾಲ್ಟ್, ½ ಟೀ ಸ್ಪೂನ್ – ಜೀರಿಗೆ ಪುಡಿ, ½ ಟೀ ಸ್ಪೂನ್ – ಚಾಟ್ ಮಸಾಲ, 1 ಟೇಬಲ್ ಸ್ಪೂನ್ – ನಿಂಬೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ¼ ಕಪ್ – ದಾಳಿಂಬೆ ಹಣ್ಣಿನ ಬೀಜ.

ಮಾಡುವ ವಿಧಾನ:

ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಹೆಸರುಕಾಳು, ಈರುಳ್ಳಿ, ಟೊಮೆಟೊ, ಸೌತೆಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಇದಕ್ಕೆ ಜೀರಿಗೆ, ಬ್ಲ್ಯಾಕ್ ಸಾಲ್ಟ್, ಚಾಟ್ ಮಸಾಲ, ಉಪ್ಪು ಸೇರಿಸಿ. ನಂತರ ನಿಂಬೆ ಹಣ್ಣಿನ ರಸ ಸೇರಿಸಿ. ನಂತರ ದಾಳಿಂಬೆ ಹಣ್ಣಿನ ಬೀಜ ಹಾಕಿ ಸರ್ವ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read