ಬೆಂಗಳೂರು: ಸಹಕಾರಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸುವುದು, ನಾಮನಿರ್ದೇಶನ ಮಾಡುವಂತಹ ಅವಕಾಶ ಹೊಂದಿರುವ ಕಾನೂನು ರೂಪಿಸಿದೆ.
ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ -2025 ಮಂಡಿಸಿ ಸೋಮವಾರ ಪ್ರತಿಪಕ್ಷ ಸದಸ್ಯರ ಆಕ್ಷೇಪಗಳ ನಡುವೆ ಧ್ವನಿಮತದ ಅಂಗೀಕಾರ ಪಡೆದುಕೊಳ್ಳಲಾಗಿದೆ. ನಿರ್ದೇಶಕರಲ್ಲಿ ಆರ್ಥಿಕ ಶಿಸ್ತು, ಜವಾಬ್ದಾರಿ ತರುವುದು, ನಿರ್ದೇಶಕರಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ, ಪ್ರತಿ ವರ್ಷ ಆಸ್ತಿ ಮಾಹಿತಿ ಸಲ್ಲಿಸಲೇಬೇಕು. ಆಸ್ತಿ ವಿವರ ನೀಡದಿದ್ದರೆ ನಿರ್ದೇಶನಕ್ಕೆ ಕುತ್ತು ಬರಲಿದೆ. ಸಹಕಾರ ಸಂಘಗಳ ಶಕ್ತಿ ಕಡಿಮೆಯಾಗದಂತೆ ಸರ್ಕಾರ ಮತ್ತು ಆರ್‌ಬಿಐ ಕ್ರಮ ಕೈಗೊಂಡಿದೆ. ಹೀಗಾಗಿ ಸಹಕಾರ ಸಂಘಗಳ ಪುನಶ್ಚೇತನಕ್ಕೆ ಪ್ರಯತ್ನ ಕೈಗೊಳ್ಳಲಾಗಿದೆ. ಸಹಕಾರ ಕ್ಷೇತ್ರವನ್ನು ಬಲಪಡಿಸುವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಮೂರು ಸಭೆಗೆ ಗೈರು ಹಾಜರಾದ್ರೆ ಮತದಾನದ ಹಕ್ಕು ರದ್ದಾಗುತ್ತದೆ. ಪ್ರಾಥಮಿಕ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಇತರೆ ಪ್ರಾಥಮಿಕ ನೆರವು ಪಡೆದ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಎಸ್ಸಿ, ಎಸ್ಟಿ, ಇತರೆ ಹಿಂದುಳಿದ ವರ್ಗದವರು, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.