ನಾಳೆ ತೆರೆ ಕಾಣಲಿದೆ ಮಹೇಶ್ ಬಾಬು ಅಭಿನಯದ ‘ಗುಂಟೂರು ಕಾರಮ್’

ಟಾಲಿವುಡ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿರುವ ಮಹೇಶ್ ಬಾಬು ಅಭಿನಯದ ‘ಗುಂಟೂರು ಕಾರಮ್’ ಸಿನಿಮಾ ನಾಳೆ ತೆರೆ ಮೇಲೆ ಬರಲು ಸಜ್ಜಾಗಿದೆ. ತ್ರಿವಿಕ್ರಂ ಶ್ರೀನಿವಾಸ್  ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಸ್ಯಾಂಡಲ್ವುಡ್ ನ ಶ್ರೀ ಲೀಲಾ ನಾಯಕಿಯಾಗಿ ಅಭಿನಯಿಸಿದ್ದು, ಮೀನಾಕ್ಷಿ ಚೌಧರಿ, ರಮೇಶ್ ಬಾಬು, ರಮ್ಯಾಕೃಷ್ಣ, ಪ್ರಕಾಶ್ ರಾಜ್, ಈಶ್ವರಿ ರಾವ್, ಮುರಳಿ ಶರ್ಮಾ, ವೆನ್ನೆಲ ಕಿಶೋರ್, ಅಜಯ್ ಗೋಶ್, ಬ್ರಹ್ಮಜಿ, ರಘು ಬಾಬು, ಜಯರಾಮ್, ಬ್ರಹ್ಮಾನಂದ ಸೇರಿದಂತೆ ಹಲವರ ತಾರಾ ಬಳಗವಿದೆ.

ಹಾರಿಕಾ ಮತ್ತು ಅಸೈನ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ರಾಧಾಕೃಷ್ಣ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೊಂದು ಆಕ್ಷನ್ ಡ್ರಾಮಾ ಕಥಾಂದರ ಹೊಂದಿರುವ ಸಿನಿಮಾವಾಗಿದ್ದು, ಮಹೇಶ್ ಬಾಬು ಅವರನ್ನು ಮತ್ತೊಮ್ಮೆ ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಕಾತುರದಿಂದ  ಕಾಯುತ್ತಿದ್ದಾರೆ.

https://twitter.com/GunturKaaram/status/1743232644429807957

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read