Shocking: ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ತನ್ನ ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಹಿಳೆಗೆ ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರೋ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಗಂಡನ ಸಾವಿನ ಸುತ್ತಲಿನ ಅನುಮಾನಗಳನ್ನು ಹೊರಹಾಕಿದ ವಿಧವೆಯನ್ನ ಹೊಡೆದ ಪರಿಣಾಮ ಆಕೆಯ ಮುಖದಲ್ಲಿ ರಕ್ತ ಹೆಪ್ಪುಗಟ್ಟಿ ಕಪ್ಪಾಗಿದೆ. ಬಳಿಕ ಕೆಲವು ಮಹಿಳೆಯರು ಚಪ್ಪಲಿ ಹಾರದೊಂದಿಗೆ ಅವಳನ್ನು ಮೆರವಣಿಗೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 30 ರಂದು ನಾಸಿಕ್ ನಗರದಿಂದ 65 ಕಿಮೀ ದೂರದಲ್ಲಿರುವ ಚಂದವಾಡ ತಾಲೂಕಿನ ಶಿವರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಇತ್ತೀಚೆಗೆ ಅಪಘಾತಕ್ಕೊಳಗಾಗಿದ್ದ ಮಹಿಳೆ ತನ್ನ ತವರು ಮನೆಯಲ್ಲಿದ್ದಾಗ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅತ್ತೆಯ ಮನೆಯವರು ಮಹಿಳೆಗೆ ತಿಳಿಸಿದ್ದರು.

ಜನವರಿ 30 ರಂದು ಪತಿ ಮರಣಾನಂತರ ಮಹಿಳೆ ತನ್ನ ಪತಿಯ ಸಾವಿನ ಸುತ್ತಲಿನ ಸನ್ನಿವೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದಳು. ಇದಕ್ಕೆ ಕೆರಳಿದ ಆಕೆಯ ಓರಗಿತ್ತಿ ಮತ್ತು ಗ್ರಾಮದ ಇತರ ಕೆಲವು ಮಹಿಳೆಯರು ಸಂತ್ರಸ್ತೆಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ನಂತರ ಆಕೆಯನ್ನು ರಕ್ಷಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read