ಮಹಾರಾಷ್ಟ್ರದಲ್ಲಿ ಕೋವಿಡ್-19 ಗೆ ವ್ಯಕ್ತಿ ಬಲಿ: ಜುಲೈ ತಿಂಗಳಲ್ಲಿ ಮೊದಲ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್-19 ಸಾವಿನ ಬಗ್ಗೆ ವರದಿಯಾಗಿದೆ. ಈ ಸಾವು ಇತ್ತೀಚೆಗೆ ಸಂಭವಿಸಿಲ್ಲ. ಕೋವಿಡ್-19ನಿಂದ ವ್ಯಕ್ತಿಯೊಬ್ಬರು ಜುಲೈ ತಿಂಗಳಲ್ಲಿ ಮೃತಪಟ್ಟಿದ್ದಾರೆ. ಆದರೆ, ಅಧಿಕೃತ ದಾಖಲೆಗಳಲ್ಲಿ ಈ ಸಾವಿನ ಸೇರ್ಪಡೆ ಈ ಬುಧವಾರವಷ್ಟೇ ನಡೆದಿದೆ.

ಕೊರೋನಾದಿಂದ ಮೃತರಾದವರು 75 ವರ್ಷದ ವ್ಯಕ್ತಿಯಾಗಿದ್ದು, ಲಿವರ್ ಕಾರ್ಸಿನೋಮಾದಿಂದ ಬಳಲುತ್ತಿದ್ದರು ಎಂದು ಬಿಎಂಸಿಯ ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿ ಡಾ. ದಕ್ಷಾ ಶಾ ತಿಳಿಸಿದ್ದಾರೆ.

ಆ ವ್ಯಕ್ತಿ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರೂ, ಅವನ ಸಾವಿಗೆ ಸೋಂಕು ಪ್ರಾಥಮಿಕ ಕಾರಣವಲ್ಲ ಎಂದು ಅವರು ಹೇಳಿದರು. ಜೂನ್ ಮತ್ತು ಜುಲೈನಲ್ಲಿ, ಬುಧವಾರ ವರದಿಯಾದ ಒಂದು ಜುಲೈ ತಿಂಗಳಲ್ಲಿ ಆದ ವ್ಯಕ್ತಿಯೊಬ್ಬರ ಸಾವನ್ನು ಹೊರತುಪಡಿಸಿ, ನಗರದಲ್ಲಿ ಯಾವುದೇ ಕೋವಿಡ್ ಸಂಬಂಧಿತ ಸಾವು-ನೋವುಗಳು ಸಂಭವಿಸಿಲ್ಲ.

ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಬಹಳ ವಿರಳವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೂ ಪರೀಕ್ಷೆಯು ತೀವ್ರವಾಗಿ ಕುಸಿದಿದೆ. ರಾಜ್ಯದಲ್ಲಿ ಬುಧವಾರ 14 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read