ಎಂಎಲ್ಸಿ ಎಲೆಕ್ಷನ್ ನಲ್ಲಿ ಬಿಜೆಪಿ, ಮಿತ್ರ ಪಕ್ಷಗಳಿಗೆ ಭರ್ಜರಿ ಜಯ: 11 ಸ್ಥಾನಗಳಲ್ಲಿ 9ರಲ್ಲಿ ಗೆಲುವು

ಮುಂಬೈ: ಮಹಾರಾಷ್ಟ್ರ ಎಂಎಲ್‌ಸಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಅಡ್ಡ ಮತದಾನದ ಪರಿಣಾಮ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 11ರಲ್ಲಿ 9 ಸ್ಥಾನ ಗಳಿಸಿದೆ.

ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ವಿಧಾನ ಪರಿಷತ್ ಸದಸ್ಯ(ಎಂಎಲ್‌ಸಿ) ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಗಳಿಸಿದೆ.

ಬಿಜೆಪಿಯಿಂದ ಕಣಕ್ಕಿಳಿದ ಎಲ್ಲಾ ಐದು ಅಭ್ಯರ್ಥಿಗಳು ಮತ್ತು ಶಿವಸೇನೆ ಮತ್ತು ಎನ್‌ಸಿಪಿಯ ತಲಾ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ. ಒಟ್ಟಾರೆಯಾಗಿ, ಈ ವರ್ಷಾಂತ್ಯದಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಮುನ್ನ ಮಹಾಯುತಿ ಮತ್ತು ಮಹಾ ವಿಕಾಸ್ ಮೈತ್ರಿಕೂಟಗಳ ನಡುವಿನ ಪ್ರಮುಖ ಸ್ಪರ್ಧೆಯಲ್ಲಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದರು.

ಬಿಜೆಪಿಯ ಪಂಕಜಾ ಮುಂಡೆ, ಯೋಗೇಶ್ ತಿಲೇಕರ್, ಪರಿಣಯ್ ಫುಕೆ, ಅಮಿತ್ ಗೋರ್ಖೆ, ಸದಾಭೌ ಖೋಟ್, ಅಜಿತ್ ಪವಾರ್-ಎನ್‌ಸಿಪಿಯ ರಾಜೇಶ್ ವಿಟೇಕರ್, ಶಿವರಾವ್ ಗರ್ಜೆ, ಮತ್ತು ಏಕನಾಥ್ ಶಿಂಧೆ-ಶಿವಸೇನೆಯ ಕೃಪಾಲ್ ತುಮಾನೆ, ಭಾವನಾ ಗವಾಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಹಾಯುತಿ ಮೈತ್ರಿಕೂಟಕ್ಕೆ ಇದು ಯಶಸ್ವಿ ಚುನಾವಣೆಯಾಗಿದೆ. ಮೈತ್ರಿಕೂಟದ ಎಲ್ಲಾ 9 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read