ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನದ ಕುರಿತ ‘ಏಕ್ ಮಹಾನಾಯಕ್’ ಎಂಬ ಹಿಂದಿ ಧಾರವಾಹಿ ಡಬ್ಬಿಂಗ್ ಆದ ‘ಮಹಾನಾಯಕ ಡಾ. ಬಿ ಆರ್ ಅಂಬೇಡ್ಕರ್’ ಧಾರವಾಹಿ 800 ಸಂಚಿಕೆಗಳನ್ನು ಪೂರೈಸಿದ್ದು, ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದೆ.
2020 ರ ಜುಲೈ ತಿಂಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯನ್ನು ಪ್ರತಿಯೊಂದು ಮನೆಯಲ್ಲೂ ಮಿಸ್ ಮಾಡದೆ ವೀಕ್ಷಿಸುತ್ತಿದ್ದರು. ಪ್ರತಿ ದಿನ ಬರುತ್ತಿದ್ದ ಈ ಧಾರಾವಾಹಿ ಇತ್ತೀಚಿಗೆ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9:30ಕ್ಕೆ ಪ್ರಸಾರವಾಗುತ್ತಿತ್ತು ಇಂದಿಗೂ ಒಳ್ಳೆಯ ರೇಟಿಂಗ್ ನಲ್ಲಿದೆ.
ವಿನೋದ್ ಮಾಣಿಕ್ರಾವ್ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದು, ಶಾಂತಿಭೂಷಣ ಕಥೆ ಬರೆದಿದ್ದಾರೆ. ಅಥರ್ವ ಕರವೇ ಸೇರಿದಂತೆ ಆಯುಧ್ ಭಾನುಶಾಲಿ, ಪ್ರಸಾದ್ ಜಾವಡೆ, ನೇಹಾ ಜೋಶಿ, ಸೌದ್ ಮನ್ಸೂರಿ, ಅಮಿತ್ ಪಾಂಡೆ, ನಾರಾಯಣಿ ಮಹೇಶ್ ವರ್ಣೆ, ಜಗನ್ನಾಥ ನಿವಾಂಗುನೆ, ವಂಶಿಕಾ ಯಾದವ್, ಅತುಲ್ ಪಾಟೀಲ್, ಅಭಿನಯಿಸಿದ್ದಾರೆ.