ಮಡಿಕೇರಿ: ಬರೋಬ್ಬರಿ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದ ಬೃಹತ್ ತಡೆಗೋಡೆಯಲ್ಲಿ ಒಂದೇ ಮಳೆಗಾಲಕ್ಕೆ ಬಿರುಕು ಮೂಡಿದೆ.
ರಾಷ್ಟ್ರೀಯ ಹೆದ್ದಾರಿ 275ರಲ್ಲಿ 2018ರಲ್ಲಿ ಭೂ ಕುಸಿತ ಸಂಭವಿಸಿ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಬೃಹತ್ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಇದೀಗ ಒಂದು ಮಳೆಗಾಲ ಕಳೆಯುವುದರೊಳಗೆ ತಡೆಗೋಡೆಯಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಭೀತಿ ಎದುರಾಗಿದೆ.
ಮಡಿಕೇರಿ ನಗರದಿಂದ ಕೇವಲ ಅರ್ಧಕಿ.ಮೀ ದೂರದಲ್ಲಿ ಈ ಹೆದ್ದಾರಿ ತಡೆಗೋಡೆ ಬಾಯ್ಬಿಟ್ಟಿದೆ. ಭಾರಿ ಮಳೆ, ನೀರು, ಮಣ್ಣಿನ ಒತ್ತಡದಿಂದಾಗಿ ತಡೆಗೋಡೆ ಬಿರುಕುಬಿಟ್ಟಿದೆ. ಆಹನ ಸವಾರರಿಗೆ ಆತಂಕ ಎದುರಾಗಿದೆ. ಆದರೆ ಸದ್ಯಕ್ಕೆ ಹೆದ್ದಾರಿಗೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.