ಭೋಪಾಲ್: ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ವೈದ್ಯ ಹೇಳುತ್ತಿದ್ದಂತೆಯೇ ತಡ ಮಾಡದೇ ಬೇರೊಂದು ಆಸ್ಪತ್ರೆಗೆ ದಾಖಲಾದ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಸಾತ್ನಾದಲ್ಲಿ ಈ ಘಟನೆ ನಡೆದಿದೆ. ದುರ್ಗಾ ದ್ವಿವೇದಿ ಎಂಬ ತುಂಬು ಗರ್ಭಿಣಿ ಸರ್ಕಾರಿ ಆಸೊಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯ ವೈದ್ಯರು ಶಿಶು ಗರ್ಭದಲ್ಲಿಯೇ ಮೃತಪಟ್ಟಿದೆ ಎಂದಿದ್ದಾರೆ. ತಕ್ಷಣ ಮಹಿಳೆಯ ಪತಿ ಪತ್ನಿಯನ್ನು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಅಲ್ಲಿ ಪರೀಕ್ಷಿಸಿದಾಗ ಮಗು ಆರೋಗ್ಯವಾಗಿಯೇ ಇದೆ. ಭ್ರೂಣದ ಉಸಿರಾಟ ಸರಿಯಾಗಿಯೇ ಇದೆ ಎಂದು ತಿಳಿಸಿದ್ದಾರೆ. ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿಯೂ ಮಗು ಆರೋಗ್ಯವಾಗಿದೆ ಎಂದು ದೃಢಪಟ್ಟಿದೆ.
ಬಳಿಕ ಸಿಜೇರಿಯನ್ ಮೂಲಕ ಮಹಿಳೆ ಹೆರಿಗೆಯಾಗಿದ್ದು, 3.8 ಕೆಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಗರ್ಹದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ಬೇಜವಾಬ್ದಾರಿ ಮೆರೆದಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳೆಯ ಕುಟುಂಬ ಒತ್ತಾಯಿಸಿದೆ.