ಸತ್ತಳೆಂದು ಭಾವಿಸಿದ್ದ ಮಹಿಳೆ ವರ್ಷದ ಬಳಿಕ ಜೀವಂತ ಪ್ರತ್ಯಕ್ಷ ; ಕೊಲೆ ಆರೋಪ ಹೊತ್ತು ಜೈಲು ಪಾಲಾಗಿದ್ದವರ ನೆಮ್ಮದಿಯ ನಿಟ್ಟುಸಿರು !

ಭೋಪಾಲ್: ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದೂವರೆ ವರ್ಷಗಳ ಹಿಂದೆ ಸತ್ತಳೆಂದು ಭಾವಿಸಿದ್ದ ಮಹಿಳೆಯೊಬ್ಬಳು ಅನಿರೀಕ್ಷಿತವಾಗಿ ಮರಳಿ ಬಂದಿದ್ದಾಳೆ. ಇದು ಕುಟುಂಬ, ನೆರೆಹೊರೆಯವರು ಮತ್ತು ವಿಶೇಷವಾಗಿ ಮಂದಸೌರ್ ಮತ್ತು ಝಾಬುವಾ ಜಿಲ್ಲೆಗಳ ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ.

ಮೃತಪಟ್ಟಿದ್ದಾಳೆಂದು ನಂಬಿದ್ದ ಮಹಿಳೆಯ ಮರು ಪ್ರತ್ಯಕ್ಷದಿಂದ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಆಕೆಯ ತಂದೆ ಆಕೆಯನ್ನು ಗಾಂಧಿ ಸಾಗರ್ ಪೊಲೀಸ್ ಠಾಣೆಗೆ ಕರೆದೊಯ್ದು ಆಕೆಯ ಮರಳುವಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆ ಭಾನ್ಪುರ, ಮಂದಸೌರ್‌ನ ಶಾರುಖ್ ಎಂಬ ವ್ಯಕ್ತಿಯೊಂದಿಗೆ ತೆರಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ನಂತರ ಆಕೆ ಕೋಟಾದಲ್ಲಿ ವಾಸಿಸುತ್ತಿದ್ದಳು, ಆದರೆ ತಪ್ಪಿಸಿಕೊಂಡು ಮನೆಗೆ ಮರಳಲು ಯಶಸ್ವಿಯಾಗಿದ್ದಾಳೆ ಎಂದು ಹೇಳಿದ್ದಾಳೆ.

ಮಹಿಳೆ ತನ್ನ ಗುರುತನ್ನು ದೃಢೀಕರಿಸಲು ತನ್ನ ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಗುರುತಿನ ದಾಖಲೆಗಳನ್ನು ಒದಗಿಸಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಮಹಿಳೆ ಕಾಣೆಯಾದಾಗ ಆಕೆಯ ಕುಟುಂಬಸ್ಥರು ಆಕೆ ಮೃತಪಟ್ಟಿದ್ದಾಳೆ ಎಂದು ನಂಬಿದ್ದರು. ಆಕೆಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು. ಅಲ್ಲದೇ ನಾಲ್ವರು ಆರೋಪಿಗಳು ಜೈಲುಪಾಲಾಗಿದ್ದಾರೆ. ಈಗ ಮಹಿಳೆ ಜೀವಂತವಾಗಿ ಬಂದಿರುವುದು ಕುತೂಹಲ ಮೂಡಿಸಿದೆ.

ಈ ಪ್ರಕರಣವು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಹಿಳೆಯ ಹೇಳಿಕೆ ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಬೆಳಕು ಚೆಲ್ಲಿದೆ. ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read