SHOCKING: ಬೈಕ್ ನಲ್ಲಿ ಹೋಗುವಾಗ ಕುತ್ತಿಗೆ ಸೀಳಿದ ಗಾಳಿಪಟದ ದಾರ; ಬಾಲಕ ಸಾವು

ತಂದೆಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ 7 ವರ್ಷದ ಬಾಲಕ ಗಾಳಿಪಟದ ಚೂಪಾದ ದಾರ ಗಂಟಲು ಸೀಳಿ ಭಾನುವಾರ ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ಧಾರ್ ನಗರದಲ್ಲಿ ಘಟನೆ ನಡೆದಿದೆ.

ನಗರದ ಹತ್ವಾರಾ ಚೌಕ್‌ನಲ್ಲಿ ವಿನೋದ್ ಚೌಹಾಣ್ ಎಂಬಾತ ತನ್ನ 7 ವರ್ಷದ ಮಗನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಚೌಹಾಣ್ ಅವರು ಗಾಯಗೊಂಡ ಮಗನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಹರಿತವಾದ ಗಾಳಿಪಟದ ದಾರದಿಂದ ಗಂಟಲು ಸೀಳಿದ 7 ವರ್ಷದ ಬಾಲಕನನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ ಎಂದು ಡಾ ಅಮಿತ್ ಸಿಸೋಡಿಯಾ ತಿಳಿಸಿದ್ದಾರೆ.

ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸಲು ‘ಮಾಂಜಾ’ ಅಥವಾ ದಾರ ಬಳಸಲಾಗುತ್ತದೆ. ಘಟನೆ ತನಿಖೆ ಕೈಗೊಳ್ಳಲಾಗಿದೆ. ಚೈನೀಸ್ ದಾರ ಅಥವಾ ಚೂಪಾದ ದಾರ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ(ಸಿಎಸ್‌ಪಿ) ರವೀಂದ್ರ ವಾಸ್ಕೆಲ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read