ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಮಧ್ಯಪ್ರದೇಶದಲ್ಲಿಯೂ ಅಧಿಕಾರದ ಗದ್ದುಗೆ ಹಿಡಿದಿದೆ. ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಮಧ್ಯ ಪ್ರದೇಶದ ಐತಿಹಾಸಿಕ ನಗರ ಉಜ್ಜಯಿನಿಯನ್ನು ಪ್ರತಿನಿಧಿಸುತ್ತಿರುವ 58 ವರ್ಷದ ಡಾ. ಮೋಹನ್ ಯಾದವ್ ಅವರನ್ನು ನೇಮಕ ಮಾಡಲಾಗಿದ್ದು, ಸದ್ಯದಲ್ಲಿಯೇ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದರ ಮಧ್ಯೆ ನಿಯೋಜಿತ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕತ್ತಿ ಕೌಶಲ್ಯ ಪ್ರದರ್ಶಿಸಿರುವ ಹಳೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. 2019ರ ಡಿಸೆಂಬರ್ ನಲ್ಲಿ ಮೋಹನ್ ಯಾದವ್ ಈ ಪ್ರದರ್ಶನ ನೀಡಿದ್ದು, ರಾಜಕಾರಣದ ಜೊತೆಗೆ ಅವರಿಗಿರುವ ಮತ್ತೊಂದು ಹವ್ಯಾಸ ಸಹ ಈ ಹಳೆ ವಿಡಿಯೋ ಮೂಲಕ ಬಹಿರಂಗವಾಗಿದೆ.
ಕಾಲೇಜು ದಿನಗಳಿಂದಲೂ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿರುವ ಮೋಹನ್ ಯಾದವ್, ಪದವಿ ನಂತರ ಎಲ್ ಎಲ್ ಬಿ ಹಾಗೂ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಮೋಹನ್ ಯಾದವ್ ಪಿ ಎಚ್ ಡಿ ಕೂಡ ಮಾಡಿದ್ದು, ಪ್ರಮುಖ ಒಬಿಸಿ ನಾಯಕರಾಗಿ ಗುರುತಿಸಿಕೊಂಡಿರುವ ಅವರಿಗೆ ಈಗ ಮಧ್ಯಪ್ರದೇಶದ ಮುಖ್ಯಮಂತ್ರಿಯ ಹುದ್ದೆ ಹುಡುಕಿಕೊಂಡು ಬಂದಿದೆ.
https://twitter.com/ashokshera94/status/1734174321378206204?ref_src=twsrc%5Etfw%7Ctwcamp%5Etweetembed%7Ctwterm%5E1734174321378206204%7Ctwgr%5Efeef49a4d3b31c04c046ca4387362b7c014c2ef3%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fmadhyapradesholdvideoofcmdesignatedrmohanyadavshowcasingswordskillsgoesviralwatch-newsid-n564420088