ಒಬ್ಬಳಿಗಾಗಿ ಇಬ್ಬರ ಫೈಟ್: ‘ಅವಳೇ ನನ್ನ ಹೆಂಡ್ತಿ’ ಎಂದು ಇಬ್ಬರಿಂದಲೂ ಪ್ರತಿಪಾದನೆ; ವಿಲಕ್ಷಣ ವಾದಕ್ಕೆ ದಂಗಾದ ಪೊಲೀಸರು…!

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಈ ಪ್ರಕರಣದಲ್ಲಿ ಓರ್ವ ಮಹಿಳೆಯನ್ನು ಇಬ್ಬರು ವ್ಯಕ್ತಿಗಳು ನನ್ನ ಪತ್ನಿ ಎಂದು ಪ್ರತಿಪಾದಿಸುತ್ತಿದ್ದು ಇದನ್ನು ಹೇಗೆ ಪರಿಹರಿಸಬೇಕು ಎಂಬುದು ಗೊತ್ತಾಗದೆ ಪೊಲೀಸರು ದಂಗಾಗಿದ್ದಾರೆ.

ಈ ಪೈಕಿ ರಾಜೇಶ್ ಸಹರಿಯ ಎಂಬಾತ ತಾನು ಮೂರು ವರ್ಷಗಳ ಹಿಂದೆ ಈ ಮಹಿಳೆಯನ್ನು ಮದುವೆಯಾಗಿರುವುದಾಗಿ ಹೇಳುತ್ತಿದ್ದರೆ ಮತ್ತೊಬ್ಬ ವಿಷ್ಣು ಪ್ರಸಾದ್ ಮೇಘ್ವಾಲ್ ಎಂಬಾತ ಫೆಬ್ರವರಿ 8 ರಂದು ನಮ್ಮಿಬ್ಬರ ಮದುವೆಯಾಗಿದ್ದು, ಹುಡುಗಿ ಮನೆಯವರು ಕಷ್ಟದಲ್ಲಿದ್ದಾರೆ ಎಂದು ಮಧ್ಯವರ್ತಿ ಹೇಳಿದ ಕಾರಣಕ್ಕೆ ಅವರಿಗೆ 1.30 ಲಕ್ಷ ರೂಪಾಯಿಗಳನ್ನು ನೀಡಿರುವುದಾಗಿ ತಿಳಿಸುತ್ತಿದ್ದಾನೆ.

ರಾಜೇಶ್ ಸಹರಿಯ ಪ್ರಕಾರ 15 ದಿನಗಳ ಹಿಂದೆ ಆತ ತನ್ನ ಪತ್ನಿಯನ್ನು ಆಕೆಯ ತವರು ಮನೆಯಲ್ಲಿ ಬಿಟ್ಟಿದ್ದ ಎನ್ನಲಾಗಿದೆ. ಸೋಮವಾರದಂದು ಆತ ಗುನಾಗೆ ಬಂದಿದ್ದು ಈ ವೇಳೆ ಈತನ ಪತ್ನಿ ಇಬ್ಬರು ಅಪರಿಚಿತ ವ್ಯಕ್ತಿಗಳ ಜೊತೆ ಇರುವುದನ್ನು ಗಮನಿಸಿದ್ದಾನೆ. ಕೂಡಲೇ ಅವರನ್ನು ಹಿಂಬಾಲಿಸಿ ಪ್ರಶ್ನಿಸಿದ್ದಾನೆ.

ಆಗ ವಿಷ್ಣು ಪ್ರಸಾದ್ ಈಕೆ ತನ್ನ ಪತ್ನಿ ಎಂದು ಹೇಳಿದ್ದು, ಇಬ್ಬರಿಗೂ ವಾದ – ವಿವಾದ ಆರಂಭವಾಗಿದೆ. ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಹಿಳೆಯನ್ನು ಆಕೆಯ ತವರಿಗೆ ಕಳುಹಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read