Video | ಸಿನಿಮೀಯ ರೀತಿಯಲ್ಲಿ ಅಕ್ರಮ ಗಣಿಗಾರಿಕೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮೊರೆನಾ (ಮಧ್ಯಪ್ರದೇಶ) : ಬಾಲಿವುಡ್‌ನ ಸಾಹಸಮಯ ದೃಶ್ಯದಂಥ ನಿಜವಾದ ಘಟನೆ ಮೊರೆನಾದಲ್ಲಿ ನಡೆದಿದೆ. ಪೊಲೀಸರು ಅಕ್ರಮವಾಗಿ ಗಣಿಗಾರಿಕೆ ಮಾಡಿದ ಮರಳು ತುಂಬಿದ ಟ್ರ್ಯಾಕ್ಟರ್-ಟ್ರಾಲಿಗಳನ್ನು ಹಿಂಬಾಲಿಸಿ, ಆರೋಪಿಗಳನ್ನು ಬಂಧಿಸುವ ಘಟನೆ ಇದಾಗಿದೆ.

ಮರಳು ಮಾಫಿಯಾವನ್ನು ಹತ್ತಿಕ್ಕಲು ನೂತನವಾಗಿ ನೇಮಕಗೊಂಡ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶೈಲೇಂದ್ರ ಸಿಂಗ್ ಚೌಹಾಣ್ ಅವರ ನಿರ್ದೇಶನದ ಮೇರೆಗೆ ಕೊತ್ವಾಲಿ, ಸ್ಟೇಷನ್ ರಸ್ತೆ ಮತ್ತು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗಳ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಎರಡು ಮರಳು ತುಂಬಿದ ಟ್ರ್ಯಾಕ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರನ್ನು ಕಂಡ ಮರಳು ಮಾಫಿಯಾ ಸದಸ್ಯರು ಪಟ್ಟಣದ ಕಿರಿದಾದ ಮಾರ್ಗಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದರು.

ಪೊಲೀಸರು ಧಾವಿಸಿ ಅವರನ್ನು ಬೆನ್ನಟ್ಟಿದರು, ವಿಸ್ಮಿಲ್ ನಗರದಲ್ಲಿ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಪೊಲೀಸರು ತಕ್ಷಣವೇ ಪ್ರದೇಶವನ್ನು ಸುತ್ತುವರೆದರು, ಅಕ್ರಮವಾಗಿ ಗಣಿಗಾರಿಕೆ ಮಾಡಿದ ಮರಳನ್ನು ತುಂಬಿದ ಟ್ರಾಲಿಗಳೊಂದಿಗೆ ಎರಡು ಟ್ರ್ಯಾಕ್ಟರ್‌ಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡರು.

https://twitter.com/FreePressMP/status/1661684012233142277?ref_src=twsrc%5Etfw%7Ctwcamp%5Etweetembed%7Ctwterm%5E1661684012233142277%7Ctwgr%5Eae01fe9e8cec0eda7ec85bce40ff1350d48cdab2%7Ctwcon%5Es1_&ref_url=https%3A%2F%2Fwww.freepressjournal.in%2Findore%2Fwatch-madhya-pradesh-cops-chase-down-sand-mafias-in-bollywood-style

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read