BREAKING: ಚುನಾವಣಾ ಸಿಬ್ಬಂದಿ ಕರೆದೊಯ್ಯುತ್ತಿದ್ದ ಬಸ್ ಗೆ ಬೆಂಕಿ, ಹಲವು ಬೂತ್ ಗಳ ಇವಿಎಂಗಳಿಗೆ ಹಾನಿ

ಮಧ್ಯಪ್ರದೇಶದ ಬೇತಲ್ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ವಿದ್ಯುನ್ಮಾನ ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವಾರು ಇವಿಎಂಗಳಿಗೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಆದರೆ, ಘಟನೆಯಲ್ಲಿ ಯಾವುದೇ ಮತಗಟ್ಟೆ ಸಿಬ್ಬಂದಿ ಹಾಗೂ ಬಸ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಮೇ 7ರ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಜಿಲ್ಲೆಯ ಗೋಲಾ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಬೇತುಲ್ ಕಲೆಕ್ಟರ್ ನರೇಂದ್ರ ಸೂರ್ಯವಂಶಿ ತಿಳಿಸಿದ್ದಾರೆ.

ಬೂತ್ ಸಂಖ್ಯೆ 275, 276, 277, 278, 279 ಮತ್ತು 280 ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳಿಗೆ ಬೆಂಕಿ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಘಟನೆಯ ವೇಳೆ ಆರು ಮತಗಟ್ಟೆಗಳು ಮತ್ತು ಅಷ್ಟೇ ಸಂಖ್ಯೆಯ ಇವಿಎಂಗಳು ಬಸ್‌ನಲ್ಲಿ ಇದ್ದವು. ಈ ಪೈಕಿ ನಾಲ್ಕು ಇವಿಎಂಗಳು ಹಾನಿಗೊಳಗಾಗಿದ್ದು, ಎರಡು ಸುರಕ್ಷಿತವಾಗಿವೆ. ಬೆಂಕಿಯ ಪರಿಣಾಮ ಇವಿಎಂಗಳಲ್ಲಿ ನಿಯಂತ್ರಣ ಘಟಕ ಅಥವಾ ಬ್ಯಾಲೆಟ್ ಯೂನಿಟ್ ಹಾನಿಯಾಗಿದೆ ಎಂದು ಸೂರ್ಯವಂಶಿ ಹೇಳಿದ್ದಾರೆ.

ತಮ್ಮ ವರದಿಯನ್ನು ಚುನಾವಣಾ ಆಯೋಗಕ್ಕೆ ಪರಿಗಣನೆಗೆ ಕಳುಹಿಸಲಾಗುವುದು. ಈಬೂತ್‌ಗಳಲ್ಲಿ ಮರು ಮತದಾನದ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read