ಚುನಾವಣೆ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿಗೆ ಖಾಲಿ ಹೂಗುಚ್ಛ ನೀಡಿದ ‘ಕೈ’ ನಾಯಕ: ಪುಷ್ಪಗುಚ್ಛ ಹಗರಣ ಎಂದು ಬಿಜೆಪಿ ವ್ಯಂಗ್ಯ

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ತಮಾಷೆಯ ಘಟನೆಯೊಂದು ನಡೆದಿದೆ.

ಸೋಮವಾರ (ನವೆಂಬರ್ 6) ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸ್ವಾಗತಿಸಲು ವೇದಿಕೆಯ ಮೇಲಿದ್ದ ಪಕ್ಷದ ನಾಯಕರೊಬ್ಬರು ಖಾಲಿ ಪುಷ್ಪಗುಚ್ಛವನ್ನು ನೀಡಿದ್ದಾರೆ. ಖಾಲಿ ಪುಷ್ಪಗುಚ್ಛವನ್ನು ಸ್ವೀಕರಿಸಿದ ಪ್ರಿಯಾಂಕಾ ಗಾಂಧಿ ನಕ್ಕಿದ್ದಾರೆ. ಆದರೆ, ಈ ಘಟನೆ ಇತರ ಕಾಂಗ್ರೆಸ್ ನಾಯಕರಲ್ಲಿ ಒಡಕು ಮೂಡಿಸಿದೆ.

ಈ ಘಟನೆಯ ವಿಡಿಯೋವನ್ನು ಹಂಚಿಕೊಂಡ ಬಿಜೆಪಿ ನಾಯಕ ರಾಕೇಶ್ ತ್ರಿಪಾಠಿ ಅವರು ಇದನ್ನು ಪುಷ್ಪಗುಚ್ಛ ಹಗರಣ ಎಂದು ಕರೆಯುವ ಮೂಲಕ ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

ಏನಿದು ಘಟನೆ?

ಚುನಾವಣಾ ಪ್ರಚಾರದ ವೇದಿಕೆಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಮುಖಂಡರು ಹೂಗುಚ್ಛ ನೀಡಿ ಸ್ವಾಗತಿಸಿದ್ರು. ಈ ವೇಳೆ, ನಾಯಕರೊಬ್ಬರು ಅವರಿಗೆ ಖಾಲಿ ಹೂಗುಚ್ಛವನ್ನು ನೀಡಿದರು. ಅದನ್ನು ಸ್ವತಃ ಪ್ರಿಯಾಂಕಾ ಅವರೇ ತೋರಿಸುತ್ತಾ ನಕ್ಕಿದ್ದಾರೆ. ಈ ಘಟನೆಯು ವೇದಿಕೆಯಲ್ಲಿದ್ದ ಇತರ ನಾಯಕರನ್ನು ಸಹ ನಗೆಗಡಲಲ್ಲಿ ತೇಲಿಸಿತು. ಇದರ ವಿಡಿಯೋವನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ.

ಅಂದಹಾಗೆ, ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಮತದಾರರನ್ನು ಓಲೈಸಲು ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಪರಸ್ಪರ ಪಕ್ಷಗಳು ಆರೋಪ-ಪ್ರತ್ಯಾರೋಪಗಳನ್ನು ನಡೆಸುತ್ತಿವೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಮತ್ತೆ ತನ್ನ ಅಧಿಕಾರ ಸ್ಥಾಪಿಸಲು ಪ್ರಯತ್ನಿಸುತ್ತಿದೆ.

https://twitter.com/i/status/1721555920973676761

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read