3.08 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮಾಧುರಿ….!

ಸಾರ್ವಕಾಲಿಕ ಅತ್ಯಂತ ಜನಪ್ರಿಯ ಭಾರತೀಯ ನಟಿಯರಲ್ಲಿ ಒಬ್ಬರಾದ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ಮಾಧವ್ ನೆನೆ ಅವರು ರೂ. 3.08 ಕೋಟಿ ಮೌಲ್ಯದ ಹೊಸ 992 ಪೋರ್ಷೆ 911 ಟರ್ಬೊ ಎಸ್ ಕಾರನ್ನು ಖರೀದಿಸಿದ್ದಾರೆ. ಇದು ಭಾರತದಲ್ಲಿ ದಂಪತಿಗಳ ಒಡೆತನದ ಎರಡನೇ ಪೋರ್ಷೆ ಸೂಪರ್ ಕಾರ್ ಆಗಿದೆ.

ಡಾ. ನೆನೆ ಹೊಚ್ಚಹೊಸ ಪೋರ್ಷೆ 911 ಟರ್ಬೊ S ಅನ್ನು ಚಾಲನೆ ಮಾಡುತ್ತಿರುವ ವೀಡಿಯೊವನ್ನು ಯೂಟ್ಯೂಬ್‌ ಒಂದು ಶೇರ್‌ ಮಾಡಿದೆ. ಮುಂಬೈನ ಬೀದಿಗಳಲ್ಲಿ ಡಾಕ್ಟರ್ ನೆನೆ ಪೋರ್ಷೆ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದು ಪೋರ್ಷೆ ಉತ್ಸಾಹಿಗಳಲ್ಲಿ ಜನಪ್ರಿಯ ಬಣ್ಣವಾಗಿದೆ. ಇದಲ್ಲದೆ, ಮತ್ತೊಂದು ಬಹುಕೋಟಿ ಸೂಪರ್‌ ಕಾರಾದ ಫೆರಾರಿ 488 ಪಿಸ್ತಾದ ಪಕ್ಕದಲ್ಲಿ ಹೊಸ ಟರ್ಬೊ ಎಸ್ ಅನ್ನು ತೋರಿಸುವ ಮತ್ತೊಂದು ವಿಡಿಯೋ ಕೂಡ ವೈರಲ್‌ ಆಗುತ್ತಿದೆ. ಅದೇ ವಿಡಿಯೋದಲ್ಲಿ ಡಾ. ನೆನೆ ಸೂಪರ್‌ಕಾರ್‌ನೊಳಗೆ ಹೋಗುವುದನ್ನು ಸಹ ನಾವು ನೋಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read