BIG NEWS: ನಾನೂ ಸಹ ಫೇಲ್ ಆಗಿದ್ದೆ; ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ ಎಂದ ಶಿಕ್ಷಣ ಸಚಿವ

ಶಿವಮೊಗ್ಗ: ತಾವೂ ಕೂಡ ಫೇಲ್ ಆಗಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ತನಗೆ ಕನ್ನಡ ಅಷ್ಟು ಚೆನ್ನಾಗಿ ಓದಲು ಬರುವುದಿಲ್ಲ ಎಂಬ ಅಚ್ಚರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಾನು ಓದುವುದರಲ್ಲಿ ಅಷ್ಟು ಬುದ್ಧಿವಂತನಾಗಿರಲಿಲ್ಲ, ನಾನೂ ಕೂಡ ಫೆಲ್ ಆಗಿದ್ದೆ. ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ. ನನ್ನ ಉಚ್ಛಾರಣೆ ತಪ್ಪಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ625ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ನಿಜಕ್ಕೂ ಖುಷಿ ತಂದಿದೆ. ವಿದ್ಯಾರ್ಥಿನಿ ಅಂಕಿತಾ ಹಾಗೂ ಆಕೆಯ ಪೋಷಕರಿಗೆ ಅಭಿನಂದನೆಗಳು. ಇಲಾಖೆ ವತಿಯಿಂದ ಶುಭಾಷಯಗಳನ್ನು ತಿಳಿಸುತ್ತೇನೆ ಎಂದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read