ಶಿಕ್ಷಣ ಸಚಿವರಿಗೆ ‘ತಲೆ ಬಾಚಿಕೊಂಡು ಬನ್ನಿ’ ಎಂದು ಹೇಳಬೇಕಾದ ಸ್ಥಿತಿ; ಬಿ.ವೈ.ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ

ಚಿತ್ರದುರ್ಗ: ರಾಜ್ಯದ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳೇ ತಲೆ ಬಾಚಿಕೊಂಡು ಬನ್ನಿ ಎಂದು ಹೇಳಬೇಕಾದ ದು:ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಶಿಕ್ಷಣ ಸಚಿವರು ಯಾವುದೋ ಸಿನಿಮಾ ಭ್ರಮೆಯಲ್ಲಿ ಇದ್ದಂತಿದೆ. ಶಾಲೆಗೆ ತೆರಳುವ ಮಕ್ಕಳ ಪೋಷಕರು ನಮ್ಮ ಮಕ್ಕಳು ತಲೆ ಬಾಚಿಕೊಂಡು ನೀಟಾಗಿ ಶಿಸ್ತಿನಿಂದ ಶಾಲೆಗೆ ಹೋಗಲಿ ಎಂದು ಬಯಸುತ್ತಾರೆ. ವಿದ್ಯಾರ್ಥಿಗಳ ಜೊತೆ ಸಂವಾದ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಆಗಾಗ ಶಾಲೆಗಳಿಗೆ ಭೇಟಿ ಕೊಡುತ್ತಾರೆ. ಈ  ಸಚಿವರನ್ನು ಕಂಡು ಮಕ್ಕಳು, ಸಚಿವರೇ ತಲೆ ಬಾಚಿಕೊಂಡು ಬನ್ನಿ ಎಂದು ಹೇಳಬೇಕಾದಂತಹ ಸ್ಥಿತಿ. ಬೇಡ ವಿಧಾನಸೌಧಕ್ಕೆ ಬರುವಾಗ ಆದರೂ ತಲೆ ಬಾಚಿಕೊಂಡು ಬನ್ನಿ ಎಂದು ಹೇಳಬೇಕಾದ ದು:ಸ್ಥಿತಿ ಬಂದಿದೆ ಎಂದರೆ ಶಿಕ್ಷಣ ಸಚಿವರಿಗೆ ನಮೋ ನಮ: ಎನ್ನಬೇಕು ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದರು.

ವಿಜಯೇಂದ್ರ ಹೇಳಿಕೆಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಮಧು ಬಂಗಾರಪ್ಪ, ನನಗೆ ಕಟಿಂಗ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟಿಂಗ್ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಚಿತ್ರರಂಗದ ಬಗ್ಗೆ ವಿಜಯೇಂದ್ರ ಮಾತನಾಡುವ ಅಗತ್ಯವಿಲ್ಲ. ನಾನು ಯಾವ ಸಿನಿಮಾ ಭ್ರಮೆಯಲ್ಲಿ ಇಲ್ಲ, ಭ್ರಮೆಯಲ್ಲಿ ಇರುವವರು ವಿಜಯೇಂದ್ರ ಎಂದು ಕಿಡಿಕಾರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read