ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಯುವತಿ, ಯಾವುದೇ ಕಾರಣಕ್ಕೂ ಮನು ವಿರುದ್ಧದ ಕೇಸ್ ಹಿಂಪಡೆಯಲ್ಲ, ಆತನಿಗೆ ಕಾನೂನು ಪ್ರಕರಾ ಶಿಕ್ಷೆಯಾಗಬೇಕು ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತ ಯುವತಿ, ಮನು ಹುಷಾರಿಲ್ಲದಾಗ ನನ್ನ ಮನೆಗೆ ಬಂದು ಕುಡಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಮನು ಪತ್ನಿ ನನ್ನ ಪತಿಯ ವಿರುದ್ಧ ಪಿತೂರಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ತೆ, ಮನು ನನ್ನ ಮನೆಗೆ ಬಂದಿದ್ದಕ್ಕೆ ಸಾಕ್ಷ್ಯಗಳಿವೆ. ನನಗೆ ಹುಷರಿಲ್ಲದಿದ್ದಾಗ ಕುಡಿಸಿ ಲೈಂಗಿಕ ದೌರ್ಜನ್ಯವೆಸಿಗಿದ್ದಾನೆ. ನನ್ನ ಖಾಸಗಿ ವಿಡಿಯೋ ಮಾಡಿಕೊಂಡಿದ್ದಾನೆ. ಎಲ್ಲದರ ಬಗ್ಗೆಯೂ ಸಾಕ್ಷ್ಯಗಳಿವೆ. ಷಡ್ಯಂತ್ರ ಎಲ್ಲಿಂದ ಬರುತ್ತೆ? ಎಂದು ಕಿಡಿಕಾರಿದ್ದಾರೆ.
ಆತ ಮಾಡಿರುವುದು ಮನೆಹಾಳು ಕೆಲಸ. ಪತ್ನಿಯಿಂದಲೇ ಆತ ಹಾಳಾಗಿರುವುದು. ಹೊರಗಡೆ ಏನ್ ಬೇಕಾದ್ರೂ ಮಾಡಿಕೋ ಎನ್ನುತ್ತಿದ್ದಳು. ಅವಳು ಹೇಳಿರುವ ಹೇಳಿಕೆಗಳು ನನ್ನ ಬಳಿ ಇದೆ. ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯಲ್ಲ. ನನಗೂ ಬೆದರಿಕೆ ಹಾಕಿದ್ದಾನೆ ಕಾನೂನು ಪ್ರಕಾರ ಆತನಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.