ಬೆಂಗಳೂರು: ಸಹಕಲಾವಿದೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪದಲ್ಲಿ ಜೈಲು ಪಾಲಾಗಿದ್ದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನುಗೆ ಬಿಗ್ ರಿಲೀಫ್ ಸಿಕ್ಕಿದೆ. ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಕೇಸ್ ಹಿಂಪಡೆದಿದ್ದಾರೆ.
ಮಡೆನೂರು ಮನು ಜೊತೆ ಸಂತ್ರಸ್ತೆ ಕಾಂಪ್ರಮೈಸ್ ಆಗಿದ್ದು, ಕೇಸ್ ಹಿಂಪಡೆದಿದ್ದಾರೆ. ಮಡೆನೂರು ಮನು ವಿರುದ್ಧ ಸಂತ್ರಸ್ತೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2022ರ ನವೆಂಬರ್ ನಿಂದ 2025ರ ಮೇ ವರೆಗೆ ನನ್ನ ಮೇಲೆ ನಿರಂತರ ಅತ್ಯಾಚಾರವೆಸಗಲಾಗಿದೆ. ಮದುವೆ ಹೆಸರಲ್ಲಿ ಅತ್ಯಾಚಾರವೆಸಗಿ, ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ತಲೆಮರೆಸಿಕೊಂಡಿದ್ದ ಮಡೆನೂರು ಮನುವನ್ನು ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಮಡೆನೂರು ಮನು ವಿರುದ್ಧ ಕೇಸ್ ಹಾಕಿದ್ದ ಸಂತ್ರಸ್ತೆ ಕೇಸ್ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.