ಬಾಲಿವುಡ್‌ನಲ್ಲಿ ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸು ಗಳಿಸುವ ನಿರೀಕ್ಷೆಗಳು ಗರಿಗೆದರುತ್ತವೆ. ಕೆಲವು ಚಿತ್ರಗಳು ನಿರೀಕ್ಷೆಯಂತೆ ಹಣ ಗಳಿಸಿದರೆ, ಇನ್ನು ಕೆಲವು ಸೋಲನ್ನು ಅನುಭವಿಸುತ್ತವೆ. ಆದರೆ ಇಂದು ನಾವು ನಿಮಗೆ ಅಂತಹ ಒಂದು ಚಿತ್ರದ ಬಗ್ಗೆ ಹೇಳಲಿದ್ದೇವೆ, ಅದು ಎಂದಿಗೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳದಿದ್ದರೂ ಕೋಟಿ ಕೋಟಿ ರೂಪಾಯಿಗಳನ್ನು ಗಳಿಸಿತು! ನಂಬಲು ಕಷ್ಟವಾದರೂ ಇದು ಸತ್ಯ.
ನಾವು ಮಾತನಾಡುತ್ತಿರುವ ಈ ಚಿತ್ರ ಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಆ ಸಿನಿಮಾ ಯಾವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಅದು 1989 ರಲ್ಲಿ ಬಿಡುಗಡೆಯಾದ “ಲಾಲ್ ದುಪಟ್ಟ ಮಲ್ಮಲ್ ಕಾ”.
ಗುಲ್ಶನ್ ಕುಮಾರ್ ಅವರು 10 ಅದ್ಭುತ ಹಾಡುಗಳ ಆಲ್ಬಮ್‌ನೊಂದಿಗೆ ಬಂದರು. ಈ ಎಲ್ಲಾ ಹಾಡುಗಳು ಕೇಳುಗರ ಮನಸ್ಸನ್ನು ಗೆದ್ದವು ಮತ್ತು ಅವರನ್ನು ಹುಚ್ಚರನ್ನಾಗಿಸಿದವು. ಈ ಹಾಡುಗಳ ಯಶಸ್ಸಿನ ನಂತರ, ಗುಲ್ಶನ್ ಅವರು ಈ ಹಾಡುಗಳನ್ನು ಆಧರಿಸಿ ಒಂದು ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದರು. ಚಿತ್ರದ ಕಥೆಯು ಸಹ ಈ ಹಾಡುಗಳ ಸುತ್ತಲೇ ಹೆಣೆಯಲಾಗಿತ್ತು.
ಆ ಸಮಯದಲ್ಲಿ ಧೂಳೆಬ್ಬಿಸಿದ ಆಲ್ಬಮ್‌ನ ಪ್ರಮುಖ ಹಾಡುಗಳೆಂದರೆ ‘ಕ್ಯಾ ಕರ್ತೆ ಥೆ ಸಾಜನಾ ತುಮ್ ಹಮ್ಸೆ’, ‘ಲಾಲ್ ದುಪಟ್ಟ ಮಲ್ಮಲ್ ಕಾ’, ‘ಸೂನಿ ಸೂನಿ ಅಖಿಯೋನ್ ಮೇ’ ಮತ್ತು ‘ರಖೀಬೋನ್ ಸೆ ಹಬೀಬೋನ್ ಸೆ’. ಆದರೆ, ಅನೇಕ ಪ್ರಯತ್ನಗಳ ಹೊರತಾಗಿಯೂ, ಈ ಹಾಡುಗಳ ಆಧಾರಿತ ಸಿನಿಮಾ ಮಾತ್ರ ಎಂದಿಗೂ ಬಿಡುಗಡೆಯಾಗಲಿಲ್ಲ. ಆದರೆ ಚಿತ್ರದ ಹಾಡುಗಳ ಆಲ್ಬಮ್ ಬಿಡುಗಡೆಯಾಯಿತು.
ಆಲ್ಬಮ್ ಬಿಡುಗಡೆಯಾದ ತಕ್ಷಣವೇ ಸೂಪರ್‌ಹಿಟ್ ಆಯಿತು. ಕೆಲವೇ ದಿನಗಳಲ್ಲಿ, ಈ ಹಾಡುಗಳ ಡಿವಿಡಿಗಳು ಭಾರಿ ಬೇಡಿಕೆ ಪಡೆದು ಮಾರುಕಟ್ಟೆಯಲ್ಲಿ ಸಿಗುವುದೇ ದುಸ್ತರವಾಯಿತು. ಮಾಧ್ಯಮ ವರದಿಗಳ ಪ್ರಕಾರ, ಈ ಸಿನಿಮಾ ಬಿಡುಗಡೆಯಾಗದೆಯೇ ಸೂಪರ್ ಹಿಟ್ ಎನಿಸಿಕೊಂಡಿತು. ಕೇವಲ 75 ಲಕ್ಷ ರೂಪಾಯಿಗಳ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬರೋಬ್ಬರಿ 2 ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಸಿ ನಿರ್ಮಾಪಕರನ್ನು ಅಚ್ಚರಿಗೊಳಿಸಿತು. ಈ ಚಿತ್ರದಲ್ಲಿ ಸಾಹೀಲ್ ಚಡ್ಡಾ ಮತ್ತು ಶಹೀನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.