Video: ಓಲಾ ಸ್ಕೂಟರ್ ಖರೀದಿಸಿ ತಪ್ಪು ಮಾಡಿದೆ ಎಂದು ಶೋ ರೂಮ್ ಮುಂದೆ ಶೋಕ ಗೀತೆ ಹಾಡಿದ ವ್ಯಕ್ತಿ…..!

ಹೆಸರಾಂತ ಕಂಪನಿ ಮೇಲೆ ಗ್ರಾಹಕರು ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದ್ರೆ ಆ ಕಂಪನಿ ಇವರ ನಿರೀಕ್ಷೆಯಂತೆ ಸೇವೆ ನೀಡಿಲ್ಲ ಎಂದಾಗ ಮನಸ್ಸಿಗೆ ನೋವಾಗುತ್ತದೆ. ಈ ಬಗ್ಗೆ ಕೆಲವರು ಕಂಪನಿಗೆ ದೂರು ನೀಡ್ತಾರೆ. ಮತ್ತೆ ಕೆಲವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡ್ತಾರೆ.

ಈಗ ಸಾಮಾಜಿಕ ಜಾಲತಾಣದಲ್ಲೂ ಅಂತಹುದೇ ಒಂದು ವಿಡಿಯೋ ವೈರಲ್‌ ಆಗಿದೆ. ಓಲಾ ಸ್ಕೂಟರ್‌ ಮೇಲೆ ಬಹಳ ಪ್ರೀತಿಯಿಟ್ಟು ಖರೀದಿ ಮಾಡಿದ್ದ ಗ್ರಾಹಕನೊಬ್ಬ, ಈಗ ನೋವು ತೋಡಿಕೊಂಡಿದ್ದಾನೆ.

ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಓಲಾ ಸ್ಕೂಟಿ ಖರೀದಿ ಮಾಡಿದ್ದ ವ್ಯಕ್ತಿ, ಓಲಾ ಶೋ ರೂಮ್‌ ಮುಂದೆ ಒಂದು ರಿಕ್ಷಾ ಮೇಲೆ ಓಲಾ ಬೈಕ್‌ ಇಟ್ಟು, ಶೋಕ ಗೀತೆ ಹಾಡಿದ್ದಾನೆ. ಓಲಾ ಕಂಪನಿ ನಮಗೆ ಮೋಸ ಮಾಡಿದೆ, ನಮ್ಮ ಹಣವನ್ನು ಲೂಟಿ ಮಾಡಿದೆ ಎಂಬ ಹಾಡನ್ನು ಹಾಡಿದ್ದಾರೆ.

ಇದು ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ವಾಟ್ಸ್‌ ಅಪ್‌ ನಲ್ಲಿ ಬಂದ ವಿಡಿಯೋವನ್ನು ಎಕ್ಸ್‌ ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಅದ್ರಲ್ಲಿ ಬರೆಯಲಾಗಿದೆ.

ಓಲಾ ಮುಂದೆ ಹಾಡು ಹೇಳ್ತಿರುವ ವ್ಯಕ್ತಿ ಸಾಗರ್‌ ಸಿಂಗ್‌ ಎಂದು ಹೇಳಲಾಗಿದೆ. ಅವರು ಕೆಲ ದಿನಗಳ ಹಿಂದೆ ಓಲಾ ಖರೀದಿ ಮಾಡಿದ್ದರು. ಒಂದು ದಿನವೂ ಸ್ಕೂಟರ್‌ ಸರಿಯಾಗಿ ಓಡಿಲ್ಲ. ಒಂದೊಂದು ದಿನವೂ ಒಂದೊಂದು ಸಮಸ್ಯೆ ಕಾಣಿಸಿಕೊಳ್ತಿದೆ. ಇದ್ರರಿಂದ ಬೇಸತ್ತ ಸಾಗರ್‌ ಈ ರೀತಿ ಮಾಡಿದ್ದಾರೆ.

https://twitter.com/DhanValue/status/1825476881858113889?ref_src=twsrc%5Etfw%7Ctwcamp%5Etweetembed%7Ctwterm%5E1825476881858113889%7Ctwgr%5E765e1387a9718130e159a50230564c5627b02c91%7Ctwcon%5Es1_&ref_url=https%3A%2F%2Fwww.freepressjournal.in%2Fviral%2Flut-gaye-hum-ola-lekar-ke-customer-takes-out-funeral-of-his-ola-electric-scooter-sings-sad-song-outside-showroom-over-poor-after-sales-service-hilarious-video-surfaces

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read