ರಾಜಸ್ಥಾನದ ಮೌಂಟ್ ಅಬುವಿನ ದೇಲ್ವಾಡಾ ಜೈನ ದೇವಾಲಯದಲ್ಲಿ ವೃದ್ಧನೊಬ್ಬ ಯುವತಿಯ ಕಾಲಿನ ಚಿತ್ರಗಳನ್ನು ಕದ್ದು ತೆಗೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯುವತಿಯೊಬ್ಬರು ದೇವಾಲಯದ ಮುಂದೆ ಶಾಂತವಾಗಿ ಕುಳಿತಿದ್ದಾಗ ಆಕೆಯನ್ನು ಗಮನಿಸುತ್ತಿದ್ದ ವೃದ್ಧ ಆಕೆಯ ಅನುಮತಿಯಿಲ್ಲದೆ ಕಾಲಿನ ಫೋಟೋಗಳನ್ನು ತೆಗೆಯಲು ಶುರು ಮಾಡಿದ್ದಾನೆ.
ಯುವತಿ ಇದನ್ನು ಗಮನಿಸಿ ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ಮೊದಲು ನಿರಾಕರಿಸಿದ್ದಾನೆ. ಆದರೆ ನಂತರ ಒತ್ತಾಯಿಸಿದಾಗ ತನ್ನ ಮೊಬೈಲ್ ಗ್ಯಾಲರಿ ತೆರೆದು ಫೋಟೋಗಳನ್ನು ತೋರಿಸಿದ್ದಾನೆ. “ನಾನೇನೂ ಮಾಡಿಲ್ಲ, ಇಗೋ ಡಿಲೀಟ್ ಮಾಡಿದೆ” ಎಂದು ಆತ ಉಡಾಫೆಯಿಂದ ಉತ್ತರಿಸಿದ್ದಾನೆ. ಈ ಘಟನೆಯನ್ನು ಅಲ್ಲಿದ್ದ ಅನುರಾಗ್ ಎಂಬುವವರು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಅನುರಾಗ್ ತಮ್ಮ ಪೋಸ್ಟ್ನಲ್ಲಿ ದೇವಾಲಯದಲ್ಲಿದ್ದ ಇತರರು ಸಹಾಯಕ್ಕೆ ಬರದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಯುವತಿ ಸಂಕಟದಲ್ಲಿದ್ದರೂ ಯಾರೂ ಆಕೆಗೆ ಬೆಂಬಲ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವೃದ್ಧನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಸಾರ್ವಜನಿಕ ಮತ್ತು ಪವಿತ್ರ ಸ್ಥಳದಲ್ಲಿ ನಡೆದಿದೆ. ಆದರೂ ಇಲ್ಲಿ ಗೌರವ ಮತ್ತು ಸುರಕ್ಷತೆ ಇಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಆ ವೃದ್ಧನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. “ಇಷ್ಟು ವಯಸ್ಸಾಗಿದ್ದರೂ ಮಹಿಳೆಯರನ್ನು ಹೀಗೆ ನೋಡುವುದು ಹೇಸಿಗೆ ಹುಟ್ಟಿಸುತ್ತದೆ” ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
This Uncle was clicking picture of a girl legs while sitting in the temple. She caught him red handed but he's still denying any wrongdoing, Such a Perv 😭😡 pic.twitter.com/UrXzhYJZYM
— Amoxicillin (@__Amoxicillin_) April 15, 2025