ಸ್ವಿಗ್ಗಿ ಬ್ಯಾಗ್ ನಲ್ಲಿ ದಿನಬಳಕೆ ವಸ್ತುಗಳ ಮಾರಾಟ; ಬುರ್ಕಾಧಾರಿ ಮಹಿಳೆಯ ಸ್ಟೋರಿ ವೈರಲ್

ದಿನಬಳಕೆಯ ಅಗತ್ಯ ವಸ್ತುಗಳನ್ನು ಸ್ವಿಗ್ಗಿ ಬ್ಯಾಗ್ ನಲ್ಲಿಟ್ಟುಕೊಂಡು ಬುರ್ಕಾ ಧರಿಸಿರುವ ಬಡ ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲಿ ಮಾರಾಟ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ರಿಜ್ವಾನಾ ಎಂಬ ಹೆಸರಿನ ಮಹಿಳೆ ಬುರ್ಖಾ ಧರಿಸಿ ಕಾಲ್ನಡಿಗೆಯಲ್ಲಿ ಸ್ವಿಗ್ಗಿ ಡೆಲಿವರಿ ಬ್ಯಾಗ್‌ನಲ್ಲಿ ದಿನಬಳಕೆಯ ಸರಕುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.

ಮೂಲಗಳ ಪ್ರಕಾರ ಅವರು ಬಡ ಕುಟುಂಬದವರಾಗಿದ್ದು ಲಕ್ನೋದ ಜಗತ್ನಾರಾಯಣ ರಸ್ತೆಯಲ್ಲಿರುವ ಜನತಾ ನಗರಿ ಕಾಲೋನಿಯಲ್ಲಿ ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ.

ಸ್ವಿಗ್ಗಿ ಬ್ಯಾಗ್ ಧರಿಸಿರುವ ಅವರು ಸ್ವಿಗ್ಗಿ ಕಂಪನಿಯಲ್ಲಿ ಕೆಲಸ ಮಾಡುವುದಿಲ್ಲ. ಬದಲಾಗಿ ದಿನಬಳಕೆಯ ವಸ್ತುಗಳನ್ನ ತಲುಪಿಸಲು ಸ್ವಿಗ್ಗಿ ಬ್ರ್ಯಾಂಡ್ ಹೆಸರಿನ ಬ್ಯಾಗ್ ಖರೀದಿಸಿದ್ದಾಗಿ ತಿಳಿಸಿದ್ದಾರೆ. ತಮ್ಮ ಬ್ಯಾಗ್ ಹರಿದಿದ್ದರಿಂದ ಸ್ವಿಗ್ಗಿ ಬ್ಯಾಗ್ ಖರೀದಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

“ನಾನು ಮನೆ-ಮನೆಗೆ ಮತ್ತು ಸ್ಥಳೀಯ ಅಂಗಡಿಗಳಿಗೆ ಯೂಸ್ ಅಂಡ್ ಥ್ರೋ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುತ್ತೇನೆ. ಅವುಗಳನ್ನು ಹಾನಿಗೊಳಗಾದ ಬ್ಯಾಗ್ ನಲ್ಲಿ ಸಾಗಿಸುತ್ತಿದ್ದೆ. ನಂತರ ನಾನು ಈ ಸ್ವಿಗ್ಗಿ ಬ್ಯಾಗ್ ಅನ್ನು 50 ರೂಪಾಯಿಗೆ ಖರೀದಿಸಿದೆ” ಎಂದು ರಿಜ್ವಾನಾ ಹೇಳಿದ್ದಾರೆ.

ರಿಕ್ಷಾ ಓಡಿಸುತ್ತಿದ್ದ ಪತಿ ಮೂರು ವರ್ಷಗಳ ಹಿಂದೆ ರಿಜ್ವಾನಾರನ್ನು ಬಿಟ್ಟು ಹೋಗಿದ್ದ. ನಾಲ್ಕು ಮಕ್ಕಳ ತಾಯಿಯಾಗಿರುವ ಈಕೆ ಎರಡು ವರ್ಷಗಳ ಹಿಂದೆ ಅವರ ಹಿರಿಯ ಮಗಳಿಗೆ ಮದುವೆ ಮಾಡಿದ್ದಾರೆ. ಈಗ ರಿಜ್ವಾನಾ ತನಗೆ ಮತ್ತು ಇತರ ಮೂವರು ಮಕ್ಕಳಿಗಾಗಿ ಜೀವನೋಪಾಯಕ್ಕಾಗಿ ಜವಾಬ್ದಾರಿಯನ್ನು ಹೊತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read