ಲಖ್ನೋ ಹೆಸರು ಬದಲಿಸುವಂತೆ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ

ಲಖ್ನೋವನ್ನು ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಮುಂದಿಟ್ಟಿದ್ದಾರೆ.

ಲಖ್ನೋವನ್ನ ‘ಲಖನ್‌ಪುರ’ ಅಥವಾ ‘ಲಕ್ಷ್ಮಣಪುರಿ’ ಎಂದು ಮರುನಾಮಕರಣ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.

ಬಿಜೆಪಿ ಸಂಸದರು ತಮ್ಮ ಪತ್ರದಲ್ಲಿ, “ಪ್ರಾಚೀನ ನಂಬಿಕೆಯ ಪ್ರಕಾರ, ಭಗವಾನ್ ರಾಮನು ಲಕ್ಷ್ಮಣನಿಗೆ ಲಖ್ನೋವನ್ನು ಉಡುಗೊರೆಯಾಗಿ ನೀಡಿದ್ದರು. ನಂತರ ಅದರ ಹೆಸರನ್ನು ‘ಲಖನ್‌ಪುರ’ ಅಥವಾ ‘ಲಕ್ಷ್ಮಣಪುರ’ ಎಂದು ಹೆಸರಿಸಲಾಯಿತು. ಆದರೆ 18 ನೇ ಶತಮಾನದಲ್ಲಿ, ಆಗಿನ ನವಾಬ್ ಅಸಫ್-ಉದ್- ದೌಲಾ ಅದನ್ನು ಲಕ್ನೋ ಎಂದು ಮರುನಾಮಕರಣ ಮಾಡಿದರು. ಈಗ ದೇಶವು ಅಮೃತ ಕಾಲವನ್ನು ಪ್ರವೇಶಿಸಿದೆ, ಈ ಗುಲಾಮಗಿರಿಯ ಸಂಕೇತವನ್ನು ತೊಡೆದುಹಾಕಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಮೇ 2022 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಲಕ್ನೋವನ್ನು ಲಕ್ಷ್ಮಣ ನಗರ ಎಂದು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್ ಅವರ ಟ್ವೀಟ್ ಹೆಚ್ಚು ಗಮನ ಸೆಳೆದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read