ಭೀಕರ ಕಟ್ಟಡ ದುರಂತ: ಪುಟ್ಟ ಬಾಲಕನ ಜೀವ ಕಾಪಾಡಿದ ಕಾರ್ಟೂನ್​ ಧಾರಾವಾಹಿ….!

ಲಖನೌ: ಲಖನೌದಲ್ಲಿ ಮೂರು ದಿನಗಳ ಹಿಂದೆ ನಡೆದ ಹಜರತ್‌ಗಂಜ್‌ನಲ್ಲಿರುವ ಅಲಯಾ ಅಪಾರ್ಟ್‌ಮೆಂಟ್ ಕಟ್ಟಡ ಕುಸಿತ ಪ್ರಕರಣವು ಕಟ್ಟಡದ ಗುಣಮಟ್ಟದ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) 48 ಗಂಟೆಗಳ ನಂತರ ಮಹಿಳೆಯ ಮೃತದೇಹವನ್ನು ಹೊರತೆಗೆದಿದೆ.

ಅಪಾರ್ಟ್‌ಮೆಂಟ್‌ನಿಂದ ಅವಶೇಷಗಳನ್ನು ತೆಗೆಯುವಾಗ ಪತ್ತೆಯಾದ ಮಹಿಳೆಯ ಶವವನ್ನು 42 ವರ್ಷದ ಶಬಾನಾ ಖಾತೂನ್ ಎಂದು ಗುರುತಿಸಲಾಗಿದೆ ಎಂದು ಎಸ್‌ಡಿಆರ್‌ಎಫ್ ತಿಳಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಮಧ್ಯೆ, ಆರು ವರ್ಷದ ಬಾಲಕನನ್ನು ಅವಶೇಷಗಳಿಂದ ರಕ್ಷಿಸಲು ಎಸ್‌ಡಿಆರ್‌ಎಫ್‌ಗೆ ಸಾಧ್ಯವಾಗಿದೆ ಎನ್ನುವ ವಿಷಯ ತಿಳಿದಿದೆ. ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆತ ಆರೋಗ್ಯವಾಗಿದ್ದಾನೆ ಎನ್ನಲಾಗಿದೆ.

ಡೋರೇಮನ್-ನೊಬಿತಾ ಕಾರ್ಟೂನ್ ಸರಣಿಯಿಂದ ತಾನು ಕಲಿತ ವಿಚಾರವನ್ನು ಮಂಚದಡಿಗೆ ಕೆಳಗೆ ಅಡಗಿಕೊಂಡು ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ ಈ ಬಾಲಕ ಎಂದು ವರದಿ ಮಾಡಿದೆ. ಒಂದು ಸಂಚಿಕೆಯಲ್ಲಿ, ಭೂಕಂಪನದ ಸಂದರ್ಭದಲ್ಲಿ ಹಾಸಿಗೆ ಅಥವಾ ಮೇಜಿನ ಕೆಳಗೆ ಆಶ್ರಯ ಪಡೆಯುವಂತೆ ನೋಬಿತಾಗೆ ಡೋರೆಮನ್ ಹೇಳಿದ್ದ ಎಂದು ಅವರು ಹೇಳಿದರು. ಅವಶೇಷಗಳಿಂದ ಇದುವರೆಗೆ 16 ಜನರನ್ನು ರಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read