ದೇಶದ ಮೊಟ್ಟ ಮೊದಲ ಆಪಲ್ ರೀಟೇಲ್ ಸ್ಟೋರ್‌ ಓಪನ್; 1984 ರ ಮೆಕಿಂತೋಷ್ ಸಾಧನ ತಂದ ಗ್ರಾಹಕ

ಭಾರತದಲ್ಲಿ ಆಪಲ್‌ನ ಮೊಟ್ಟಮೊದಲ ರೀಟೇಲ್ ಸ್ಟೋರ್‌ಗೆ ಮುಂಬೈನಲ್ಲಿ ಚಾಲನೆ ನೀಡಲಾಗಿದೆ. ಆಪಲ್ ಸಿಇಓ ಟಿಮ್ ಕುಕ್ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಸ್ಟೋರ್‌ನ ಉದ್ಘಾಟನೆ ಮಾಡಿದ್ದಾರೆ.

ಭಾರತದಲ್ಲಿ ಆಪಲ್‌ನ 25ನೇ ವರ್ಷಾಚರಣೆಗೂ ಈ ಸಂದರ್ಭ ಸಾಕ್ಷಿಯಾಗಿದೆ. ಇದೇ ವೇಳೆ, ಆಪಲ್‌ನ ಕಟ್ಟಾ ಅನುಯಾಯಿಯಾಗಿರುವ ವ್ಯಕ್ತಿಯೊಬ್ಬರು 1984ರ ಮೆಕಿಂತೋಷ್‌ ಸಾಧನವೊಂದನ್ನು ಬಿಕೆಸಿಗೆ ತರುವ ಮೂಲಕ ಟ್ವಿಟರ್‌ನಲ್ಲಿ ಭಾರೀ ಸುದ್ದಿ ಮಾಡಿದ್ದಾರೆ.

ಇದೇ ವೇಳೆ, ಮುಂಬೈನ ವಡಾಪಾವ್‌ ಅನ್ನು ಟಿಮ್ ಕುಕ್‌ಗೆ ಪರಿಚಯಿಸಿದ ನಟಿ ಮಾಧುರಿ ದೀಕ್ಷಿತ್‌ರನ್ನು ಭೇಟಿಯಾದ ಕ್ಷಣಗಳ ಚಿತ್ರವನ್ನು ಟ್ವೀಟ್ ಮಾಡಿದ ಕುಕ್, ತಮ್ಮ ಮುಂಬೈ ಭೇಟಿಯ ಬಗ್ಗೆ ತಿಳಿಸಿದ್ದಾರೆ.

ಸ್ಟೋರ್‌ನ ಉದ್ಘಾಟನೆ ವೇಳೆ ಬಾಲಿವುಡ್ ಸೆಲೆಬ್ರಿಟಿಗಳಾದ ಮೌನಿ ರಾಯ್, ಸೂರಜ್ ನಂಬಿಯಾರ್‌, ರವೀನಾ ಟಂಡನ್, ಎಆರ್‌ ರೆಹಮಾನ್ ಹಾಜರಿದ್ದರು. ಆಪಲ್‌ ದೆಹಲಿಯಲ್ಲೂ ಸಹ ತನ್ನ ರೀಟೇಲ್ ಮಳಿಗೆಯನ್ನು ಗುರುವಾರ ತೆರೆಯಲಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read