ಪತಿಯ ಪೂಜೆ ಮಾಡುವ ಭೀಮನ ಅಮಾವಾಸ್ಯೆಯಂದೇ ಗಂಡನ ಜೀವ ತೆಗೆಸಿದ ಪತ್ನಿ

ಬೆಳಗಾವಿ: ಪತಿಯ ಆಯಸ್ಸು ಹೆಚ್ಚಾಗುತ್ತದೆ ಎಂದು ಭೀಮನ ಅಮಾವಾಸ್ಯೆ ದಿನ ಗಂಡನ ಪಾದ ಪೂಜೆ ಮಾಡುವ ಸಂಪ್ರದಾಯವಿದೆ.

ಬೆಳಗಾವಿಯಲ್ಲಿ ಭೀಮನ ಅಮಾವಾಸ್ಯೆ ದಿನವೇ ಮಹಿಳೆಯೊಬ್ಬಳು ಪ್ರಿಯಕರನಿಂದ ಪತಿಯನ್ನು ಕೊಲೆ ಮಾಡಿಸಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ವಡೆರಟ್ಟಿಯಲ್ಲಿ ಹಾಡಹಗಲೇ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಶಂಕರ(25) ಕೊಲೆಯಾದ ಯುವಕ. ಕೊಲೆಯಾದ ಶಂಕರನ ಪತ್ನಿ ಪ್ರಿಯಾಂಕಾ(21) ಮತ್ತು ಆಕೆಯ ಪ್ರಿಯಕರ ಬೈರನಟ್ಟಿ ಗ್ರಾಮದ ಶ್ರೀಧರ(22) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಮಾವಾಸ್ಯೆಯ ದಿನ ಪತಿಯೊಂದಿಗೆ ವಡೆರಟ್ಟಿಯ ಬನಸಿದ್ದೇಶ್ವರ ದೇವಾಲಯಕ್ಕೆ ಶಂಕರ ಮತ್ತು ಪ್ರಿಯಾಂಕಾ ಬಂದಿದ್ದಾರೆ. ದೇವರ ದರ್ಶನ ಮುಗಿಸಿ ವಾಪಸ್ ಹೋಗುವಾಗ ದೇವಾಲಯದ ಆವರಣದಲ್ಲೇ ಶ್ರೀಧರ ಲಾಂಗ್ ನಿಂದ ಶಂಕರನ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾನೆ.

ದೇವಾಲಯಕ್ಕೆ ಬಂದಿರುವುದಾಗಿ ಪ್ರಿಯಕರ ಶ್ರೀಧರನಿಗೆ ಪ್ರಿಯಾಂಕಾ ಮಾಹಿತಿ ನೀಡಿ ಕರೆಸಿಕೊಂಡು ಕೊಲೆ ಮಾಡಿಸಿದ್ದಾಳೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀಧರ ಮತ್ತು ಪ್ರಿಯಾಂಕಾರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಧರ ಮತ್ತು ಪ್ರಿಯಾಂಕಾ ಪ್ರೀತಿಸುತ್ತಿದ್ದರು. ಪ್ರಿಯಾಂಕಾ ತಾಯಿಗೆ ಈ ವಿಚಾರ ಗೊತ್ತಾಗಿ ತಮ್ಮ ಶಂಕರನೊಂದಿಗೆ ಮಾರ್ಚ್ 19 ರಂದು ಮದುವೆ ಮಾಡಿದ್ದರು ಎನ್ನಲಾಗಿದೆ. ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read