ಪತಿ ನಾಪತ್ತೆ ಎಂದು ದೂರು ನೀಡಿದ ಪತ್ನಿ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಕೊಲೆ ರಹಸ್ಯ

 ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿಸಿದ ಘಟನೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬೇತಮಂಗಲ ಪೊಲೀಸರು ವೈಟ್ ಫೀಲ್ಡ್ ಮೋರಿಯಲ್ಲಿ ಶವ ಎಸೆದಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಕೋಗಿಲಹಳ್ಳಿ ಗ್ರಾಮದ ಸುನಂದಾ(35), ಆಕೆಯ ಪ್ರಿಯಕರ ಚಿಂತಾಮಣಿ ತಾಲೂಕಿನ ವೆಂಕಟೇಶ ಬಂಧತ ಆರೋಪಿಗಳು.

ಶಂಕರ ರೆಡ್ಡಿ(45) ಕೊಲೆಯಾದ ವ್ಯಕ್ತಿ. ಕೋಗಿಲಹಳ್ಳಿಯ ಶಂಕರರೆಡ್ಡಿ ವೈಟ್ ಫೀಲ್ಡ್ ಬಳಿಯ ನಲ್ಲಾರಹಳ್ಳಿಯಲ್ಲಿ ನೆಲೆಸಿದ್ದು, ಸಣ್ಣ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಹೋಟೆಲ್ ಸಮೀಪವೇ ಇದ್ದ ಶಾಲೆಯಲ್ಲಿ ವೆಂಕಟೇಶ ವಾಹನ ಚಾಲಕನಾಗಿದ್ದ. ಇಬ್ಬರೂ ಒಂದೇ ಕಟ್ಟಡದಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರು. ಮಹಿಳೆ ಸುನಂದಾ ಜೊತೆಗೆ ವೆಂಕಟೇಶ ಆಕ್ರಮ ಸಂಬಂಧ ಬೆಳೆಸಿದ್ದ.

ಮುಳಬಾಗಿಲಿಗೆ ಶಂಕರ ರೆಡ್ಡಿಯನ್ನು ಕರೆಸಿಕೊಂಡಿದ್ದ ವೆಂಕಟೇಶ ಮದ್ಯ ಸೇವಿಸಿದ ನಂತರ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಶವವನ್ನು ವೈಟ್ ಫೀಲ್ಡ್ ಮೋರಿಯೊಂದರಲ್ಲಿ ಎಸೆದು ಪರಾರಿಯಾಗಿದ್ದಾರೆ. ಪತ್ನಿ ಸುನಂದಾ ಬೇತಮಂಗಲ ಠಾಣೆ ಪೊಲೀಸರಿಗೆ ಪತಿ ಶಂಕರರೆಡ್ಡಿ ನಾಪತ್ತೆಯಾಗಿದ್ದ ಬಗ್ಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read