ʼನಾಟು ನಾಟುʼ ಹಾಡಿಗೆ ’ಕ್ವಿಕ್ ಸ್ಟೈಲ್’ ತಂಡದ ಹುಕ್ ಸ್ಟೆಪ್; ವಿಡಿಯೋ ಫುಲ್ ವೈರಲ್

ನೀವೇನಾದರೂ ನಾರ್ವೇಯನ್ ನೃತ್ಯ ತಂಡ ’ಕ್ವಿಕ್ ಸ್ಟೈಲ್’ ಆಸ್ಕರ್‌ ವಿಜೇತ ನಾಟು ನಾಟು ಹಾಡಿಗೆ ಸ್ಟೆಪ್ ಹಾಕುವುದನ್ನು ನೋಡಬೇಕೆಂದುಕೊಂಡಿದ್ದಲ್ಲಿ, ನಿಮಗೊಂದು ಪರ್ಫೆಕ್ಟ್ ಪೋಸ್ಟ್ ತಂದಿದ್ದೇವೆ. ಭಾರತದಲ್ಲಿ ಭಾರೀ ಅಭಿಮಾನಿಗಳನ್ನು ಹೊಂದಿರುವ ಈ ಜನಪ್ರಿಯ ನೃತ ತಂಡ ಹಿಂದಿ ಹಾಡುಗಳಿಗೆ ಮಸ್ತ್‌ ಸ್ಟೆಪ್ ಹಾಕುತ್ತಾ ಮಂದಿ ಮನವನ್ನು ಗೆದ್ದುಕೊಂಡಿತ್ತು.

ಇದೀಗ ನಾಟು ನಾಟು ಹುಕ್ ಸ್ಟೆಲ್‌ಗೆ ಹೆಜ್ಜೆ ಹಾಕಿದ ’ಕ್ವಿಕ್ ಸ್ಟೈಲ್’. ಭಾರತದಲ್ಲಿ ಸದ್ಯ ಪ್ರವಾಸ ಮಾಡುತ್ತಿರುವ ಈ ತಂಡ ವಿರಾಟ್ ಕೊಹ್ಲಿ, ಸುನೀಲ್ ಶೆಟ್ಟಿ ಹಾಗೂ ರವೀನಾ ಟಂಡನ್‌ ಜೊತೆಗೆ ಸೇರಿ ನೃತ್ಯ ಮಾಡಿದ ಬಳಿಕ ಇದೀಗ ಎಸ್‌ಎಸ್ ರಾಜಮೌಳಿರ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿಗೆ ಸ್ಟೆಪ್ ಹಾಕಿದೆ.

ತಮ್ಮ ಈ ಪೋಸ್ಟ್‌ಗೆ ಹಾಕಿದ ಕ್ಯಾಪ್ಷನ್‌ನಲ್ಲಿ ಈ ಗುಂಪು ಆರ್‌ಆರ್‌ಆರ್‌ ಚಿತ್ರ ನಾಯಕರಾದ ರಾಮ್ ಚರಣ್ ಹಾಗೂ ಜೂನಿಯರ್‌ ಎನ್‌ಟಿಆರ್‌ಗೆ 95ನೇ ಅಕಾಡೆಮಿ ಪ್ರಶಸ್ತಿಗಳನ್ನು ಜಯಿಸಿದ್ದಕ್ಕೆ ಅಭಿನಂದನೆಯನ್ನೂ ಸಲ್ಲಿಸಿದೆ.

https://youtu.be/QqDwY3aNhO4

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read