ಪ್ರೀತಿಗೆ ಒಪ್ಪದ ಯುವತಿ ಮನೆ ಮೇಲೆ ಕಲ್ಲು ತೂರಿ ಕೊಲೆ ಬೆದರಿಕೆ ಹಾಕಿದ ಕಿಡಿಗೇಡಿ

ಬೆಳಗಾವಿ: ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಮಾಸುವ ಮೊದಲೇ ಬೆಳಗಾವಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಪಾಗಲ್ ಪ್ರೇಮಿಯ ಕಾಟದಿಂದ ಯುವತಿ ಮತ್ತು ಆಕೆಯ ಪೋಷಕರು ಕಂಗಾಲಾಗಿದ್ದಾರೆ. ಬೆಳಗಾವಿ ತಾಲೂಕಿನ ಕಿಣೈ ಗ್ರಾಮದಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಬಾಗಿಲಿಗೆ ಬೆಂಕಿ ಹಚ್ಚಿದ್ದು ಯುವತಿ ಮತ್ತು ಯುವತಿಯ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.

ತಿಪ್ಪಣ್ಣ ಡೋಕರೆ(27) ಮೂರು ವರ್ಷಗಳಿಂದ ಯುವತಿಗೆ ಪೀಡಿಸುತ್ತಿದ್ದ. ಬಿಕಾಂ ಓದುತ್ತಿರುವ ಯುವತಿ ಕಾಲೇಜಿಗೆ ಹೋಗುವಾಗ ಹಿಂಬಾಲಿಸಿಕೊಂಡು ಬಂದು ರೇಗಿಸುತ್ತಿದ್ದ. ಕಿಣೈ ಗ್ರಾಮದಲ್ಲಿ ತಾಯಿಯ ಜೊತೆಗೆ ಯುವತಿ ವಾಸವಾಗಿದ್ದು, ಈತನ ಕಾಟದಿಂದ ಓದುವುದನ್ನು ನಿಲ್ಲಿಸಿದ್ದಳು. ಮಗಳನ್ನು ಮದುವೆ ಮಾಡಿಕೊಡು ಎಂದು ಯುವತಿ ತಾಯಿಗೂ ಆರೋಪಿ ಧಮ್ಕಿ ಹಾಕಿದ್ದಾನೆ. ಮದುವೆ ಮಾಡಿಕೊಡದಿದ್ದರೆ ಇಬ್ಬರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಕೆಲವು ತಿಂಗಳ ಹಿಂದೆ ಯುವತಿ ಮನೆ ಹಿಂಬಾಗಿಲಿಗೆ ಆರೋಪಿ ಬೆಂಕಿ ಹಚ್ಚಿದ್ದು, ಈತನ ಕಾಟಕ್ಕೆ ಬೇಸತ್ತು ಮೂರು ವರ್ಷಗಳ ಹಿಂದೆ ಯುವತಿ ಪೊಲೀಸರಿಗೆ ದೂರು ನೀಡಿದ್ದರು. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದ್ದರು. ಮತ್ತೆ ಹಳೆ ಚಾಳಿ ಮುಂದುವರೆಸಿದ ಆರೋಪಿ ಯುವತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ರಕ್ಷಣೆ ಕೋರಿ ಯುವತಿ ಮತ್ತು ಅವರ ತಾಯಿ ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದು, ಆಯುಕ್ತರ ಸೂಚನೆ ಮೇರೆಗೆ ಯುವತಿ ಮನೆಗೆ ಪೊಲೀಸ್ ಕಾನ್ಸ್ಟೇಬಲ್ ನಿಯೋಜಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read