ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿರುವ ‘ಲವ್ ರೆಡ್ಡಿ’ ಚಿತ್ರ ನಿನ್ನೆಯಷ್ಟೇ ಕನ್ನಡದಲ್ಲಿ ತೆರೆ ಕಂಡಿದ್ದು, ಅದ್ಭುತ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಾಜ್ಯದೆಲ್ಲೆಡೆ ‘ಲವ್ ರೆಡ್ಡಿ’ ಹವಾ ಜೋರಾಗಿದ್ದು, ಇಂದು ಸಂಜೆ 5:00 ಗಂಟೆಗೆ ಚಿತ್ರತಂಡ ಇನ್ಸ್ಟಾ ಲೈವ್ ಬರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಸ್ಮರಣ್ ರೆಡ್ಡಿ ನಿರ್ದೇಶನದ ನೈಜ ಘಟನಾಧಾರಿತ ಈ ಚಿತ್ರದಲ್ಲಿ ಅಂಜನ್ ರಾಮಚಂದ್ರ ನಾಯಕ ನಟನಾಗಿ ಅಭಿನಯಿಸಿದ್ದು, ಶ್ರಾವಣಿ ಅವರಿಗೆ ಜೋಡಿಯಾಗಿದ್ದಾರೆ.
ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ, ಕೆ ಶಿವಶಂಕರ ವರಪ್ರಸಾದ್, ಮೋಹನ್ ಚಾರಿ, ಅಸ್ಕರ್ ಅಲಿ ಅವರ ಛಾಯಾಗ್ರಾಹಣ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನವಿದೆ.
ಪ್ರಿನ್ಸ್ ಹೆನ್ರಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸುನಂದಾ ಬಿ ರೆಡ್ಡಿ ಸೇರಿದಂತೆ ಹೇಮಲತಾ ರೆಡ್ಡಿ, ರವೀಂದ್ರ ಜಿ, ಮದನಗೋಪಾಲ್ ರೆಡ್ಡಿ, ನಾಗರಾಜ್ ಬೀರಪ್ಪ, ಪ್ರಭಂಜನ್ ರೆಡ್ಡಿ, ನವೀನ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.
ತೆಲುಗು ಭಾಷೆಯಲ್ಲಿ ಬಿಡುಗಡೆಯಾದ ಸಮಯದಲ್ಲಿ ಜಿಪಿಆರ್ ಮಾಲ್ ನಲ್ಲಿ ಮಹಿಳೆಯೊಬ್ಬರು ಈ ಚಿತ್ರದ ಕಲಾವಿದರಾದ ಎನ್ ಟಿ ರಾಮಸ್ವಾಮಿ ಅವರಿಗೆ ಕಪಾಳಮೋಕ್ಷ ಮಾಡುವ ಮೂಲಕ ದೊಡ್ಡ ಸುದ್ದಿಯಾಗಿದ್ದರು.