ಅಮಾನವೀಯ ಘಟನೆ: ಮಕ್ಕಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಾಯಿ ಅಂತ್ಯ ಸಂಸ್ಕಾರ ಬಹಿಷ್ಕರಿಸಿದ ಸ್ವಜಾತಿ ಬಂಧುಗಳು

ಮೈಸೂರು: ಹೆಣ್ಣು ಮಕ್ಕಳಿಬ್ಬರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾಗಿದ್ದರಿಂದ ಅವರ ತಾಯಿಯ ಅಂತ್ಯ ಸಂಸ್ಕಾರವನ್ನು ಸ್ವಜಾತಿ ಬಂಧುಗಳು ಬಹಿಷ್ಕರಿಸಿದ ಅಮಾನವೀಯ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

65 ವರ್ಷದ ಕಳಸಮ್ಮ ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರ ಇಬ್ಬರು ಹೆಣ್ಣು ಮಕ್ಕಳು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದಾಗಿ ಸ್ವಜಾತಿ ಬಂಧುಗಳು ಆಕ್ರೋಶಗೊಂಡಿದ್ದರು. ಕಳಸಮ್ಮ ಅವರ ಅಂತ್ಯಕ್ರಿಯೆಯಲ್ಲಿ ಸ್ವಜಾತಿ ಬಂಧುಗಳು ಮತ್ತು ಸಂಬಂಧಿಕರು ಭಾಗವಹಿಸಲಿಲ್ಲ. ಇದರಿಂದ ನೊಂದುಕೊಂಡ ಹೆಣ್ಣು ಮಕ್ಕಳು ಗ್ರಾಮದ ಇತರರ ಸಹಾಯದಿಂದ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read