ಗದಗ: ಯುವಕನಿಗೆ ಯುವತಿಯಿಂದಲೇ ಲವ್ ಜಿಹಾದ್ ಆಗಿರುವ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆಯಲ್ಲಿ ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿಯ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿರುವ ವಿಚಿತ್ರ ಘತನೆ ನಡೆದಿದೆ.
ವಿಶಾಲ್ ಕುಮಾರ್ ಎಂಬ ಹಿಂದೂ ಯುವಕ ತಹಸೀನ್ ಎಂಬ ಯುವತಿಯನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ. ಜೂನ್ ೫ರಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಯುವತಿ ಒಪ್ಪಿದ್ದಳು, ಆದರೆ ಈಗ ನಿರಾಕರಿಸುತ್ತಿದ್ದಾಳೆ. ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿತ್ತು. ಆದರೆ ಈಗ ತಹಸೀನ್ ತಾಯಿ ಬೇಗಂ ಮುಸ್ಲಿಂ ಧರ್ಮದಂತೆ ವಿವಾಹವಾಗಬೇಕು. ಕೊರಮ ಸಮುದಾಯ ಬಿಟ್ಟು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ತಹಸೀನ್ ಕೂಡ ಜಮಾತ್ ಗೆ ಹೋಗುವಂತೆ ಒತ್ತಾಯಿಸುತ್ತಿದ್ದಾಳೆ ಎಂದು ಯುವಕ ಆರೋಪಿಸಿದ್ದಾನೆ.
ಮತಾಂತರ ಆಗದಿದ್ದರೆ ರೇಪ್ ಕೇಸ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಯುವಕ ಹಿಂದೂ ಸಂಘಟನೆ ಬಳಿ ನೋವು ತೋಡಿಕೊಂಡಿದ್ದು, ಗದಗ ಶಹರ ಠಾಣೆಯಲ್ಲಿ ದೂರು ನೀಡಲು ಯುವಕ ಮುಂದಾಗಿದ್ದಾನೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದ್ದು, ಇನ್ನಾವ ತಿರುಪಡೆಯಲಿದೆ ಕಾದುನೋಡಬೇಕಿದೆ.