ವಿಮಾನದೊಳಗೆ ಪ್ರೇಮ ನಿವೇದನೆ: ಇದು ಪ್ರೀಪ್ಲ್ಯಾನ್ಡ್​ ಎಂದ ನೆಟ್ಟಿಗರು

ಜನರು ತಮ್ಮ ಪ್ರೀತಿಪಾತ್ರರನ್ನು ಅಚ್ಚರಿಗೊಳಿಸುವುದರಲ್ಲಿ ಮತ್ತು ಅವರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ವಿಶೇಷ ಕ್ಷಣವನ್ನು ರಚಿಸುವಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಈ ಸಮಯದಲ್ಲಿ, ಒಬ್ಬ ವ್ಯಕ್ತಿ ತನ್ನ ಪ್ರೇಮಿ ವಿಮಾನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಅದೇ ವಿಮಾನವನ್ನು ಹತ್ತುವ ಮೂಲಕ ಪ್ರಪೋಸ್ ಮಾಡಲು ನಿರ್ಧರಿಸಿದ್ದು ಅದರ ವಿಡಿಯೋ ಈಗ ವೈರಲ್​ ಆಗಿದೆ.

ಏರ್ ಇಂಡಿಯಾ ವಿಮಾನವು 35 ಸಾವಿರ ಅಡಿಗಳಷ್ಟು ಮೇಲೆ ಹಾರುತ್ತಿರುವಾಗ ಯುವತಿಗೆ ಯುವಕ ಪ್ರಪೋಸ್ ಮಾಡಲು ಒಂದು ಮೊಣಕಾಲಿನ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ರಮೇಶ್ ಕೋಟಾನಾ ಎಂಬ ವ್ಯಕ್ತಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಯುವಕ ಗುಲಾಬಿ ಬಣ್ಣದ ಚಾರ್ಟ್ ಪೇಪರ್ ಅನ್ನು ಹಿಡಿದುಕೊಂಡು ತನ್ನ ಪ್ರೇಯಸಿಯ ಕಡೆಗೆ ಪ್ರಪೋಸ್ ಮಾಡಲು ಹೋಗುತ್ತಿರುವುದನ್ನು ಕಾಣಬಹುದು. ಲಂಡನ್-ಮುಂಬೈ ವಿಮಾನದಲ್ಲಿ ಈ ಘಟನೆ ನಡೆದಿದೆ. ಈತ ಅಲ್ಲಿ ಇರುವುದು ಯುವತಿಗೆ ತಿಳಿದಿರಲಿಲ್ಲ. ಅವನನ್ನು ನೋಡುತ್ತಿದ್ದಂತೆಯೇ ಯುವತಿ ಪುಳಕಿತಳಾಗಿದ್ದಾಳೆ.

ಆ ವ್ಯಕ್ತಿ ಬ್ಯಾನರ್‌ ಹಿಡಿದು ನಿಂತುಕೊಂಡು, “ನಾನು ಶಾಶ್ವತವಾಗಿ ನಿನ್ನ ಜೊತೆ ಇರಲು ಬಯಸುತ್ತೇನೆ. ನೀವು ನನ್ನೊಂದಿಗೆ ನಡೆಯಲು ಬಯಸುತ್ತೀರಾ? ” ಎಂದು ರೊಮ್ಯಾಂಟಿಕ್​ ಆಗಿ ಕೇಳಿದಾಗ ಯುವತಿ ಹೌದು ಎಂದಿದ್ದಾಳೆ.

ಇದನ್ನು ನೋಡಿ ಹಲವು ನೆಟ್ಟಿಗರು ಇದು ತೀರಾ ಹಳೆಯ ಸ್ಟೈಲ್​. ಈಗ ಎಲ್ಲವೂ ಪ್ರೀಪ್ಲ್ಯಾನ್ಡ್​. ಇದರಲ್ಲಿ ಅಚ್ಚರಿಯ ವಿಷಯ ಏನೂ ಇಲ್ಲ, ಇಬ್ಬರೂ ನಾಟಕ ಮಾಡುತ್ತಿದ್ದಾರೆ ಎಂದಿದ್ದರೆ, ಕೆಲವರು ಎಂಥ ಸುಮಧುರ ಪ್ರೀತಿ ಎಂದು ಶ್ಲಾಘಿಸಿದ್ದಾರೆ.

https://twitter.com/rameshkotnana1/status/1613162657825320960?ref_src=twsrc%5Etfw%7Ctwcamp%5Etweetembed%7Ctwterm%5E1613162657825320960%7Ctwgr%5E24b03e1e354c9db9badcc74e7a4d82fd1c2d162f%7

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read