ಹಾವೇರಿ : ಪ್ರಿಯತಮ ಕೈ ಕೊಟ್ಟಿದ್ದಕ್ಕೆ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ.ಮದುವೆಯಾಗುತ್ತೇನೆ ಅಂತ ನಂಬಿಸಿ ಯುವತಿಯನ್ನ ಗರ್ಭಿಣಿ ಮಾಡಿದ ಯುವಕ ನಂತರ ಮದುವೆಯಾಗಲು ಒಲ್ಲೆ ಎಂದಿದ್ದಾನೆ. ಇದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನ ಬ್ಯಾಡಗಿ ತಾಲೂಕಿನ ಶಂಕ್ರಿಕೊಪ್ಪ ನಿವಾಸಿ ಸಿಂದೂ (25) ಎಂದು ಗುರುತಿಸಲಾಗಿದೆ.
ಸಿಂದೂ ಅಜ್ಜಿ ಮನೆಯಲ್ಲಿದ್ದುಕೊಂಡು ವಿದ್ಯಾಬ್ಯಾಸ ಮಾಡುತ್ತಿದ್ದಳು. ಆಗ ಸಿಂದೂಗೆ ಶರತ್ ಪರಿಚಯವಾಗಿದೆ. ಇಬ್ಬರು 4 ವರ್ಷ ಪ್ರೀತಿಸಿದ್ದಾರೆ. ನಂತರ ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಮದುವೆಯಾಗು ಅಂದಿದ್ದಕ್ಕೆ ಶರತ್ ಒಲ್ಲೆ ಎಂದಿದ್ದ.ಇದರಿಂದ ಮನನೊಂದ ಯುವತಿ ಸೂಸೈಡ್ ಮಾಡಿಕೊಂಡಿದ್ದಾಳೆ. ಘಟನೆ ಹಿನ್ನೆಲೆ ಯುವತಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು.ಯುವಕ ಶರತ್ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
