ಹತ್ತು ದಿನದಲ್ಲಿ ಮನೆಯಲ್ಲಿಯೇ ಆರಾಮವಾಗಿ ಕಡಿಮೆ ಮಾಡಿ 5 ಕೆಜಿ ತೂಕ……!

ತೂಕ ಜಾಸ್ತಿಯಾಗಿದೆ ಎನ್ನುವ ಚಿಂತೆ ಕಾಡ್ತಿದೆಯಾ. ತೆಳ್ಳಗಾಗಲು ಸಿಕ್ಕಾಪಟ್ಟೆ ಪ್ರಯತ್ನ ಪಟ್ಟು, ಕೈ ಖಾಲಿ ಮಾಡಿಕೊಂಡು ಕುಳಿತಿದ್ದೀರಾ? ಹಾಗಿದ್ರೆ ಖರ್ಚಿಲ್ಲದೆ ಮನೆಯಲ್ಲಿಯೇ ಆರಾಮವಾಗಿ ತೂಕ ಇಳಿಸಿಕೊಳ್ಳೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ಕೇವಲ 10 ದಿನಗಳಲ್ಲಿ 5 ಕೆ.ಜಿ ತೂಕ ಇಳಿಸಿಕೊಳ್ಳುವ ಉಪಾಯ ಇಲ್ಲಿದೆ.

ನೈಸರ್ಗಿಕ ಔಷಧಿ ವಾಟರ್ ಥೆರಪಿ ಮೂಲಕ ತೂಕ ಇಳಿಸಿಕೊಳ್ಳಬಹುದು. ಬ್ರಿಟನ್ ನ ಫಿಟ್ನೆಸ್ ಕೋಚ್ ಶೌನ್ ವಾಕರ್ ವಾಟರ್ ಥೆರಪಿಯ ಕೆಲವೊಂದು ಪ್ರಯೋಗಗಳನ್ನು ಮಾಡಿದ್ದಾರೆ. ವಾಕರ್ ಹೇಳುವಂತೆ ವಾಟರ್ ಥೆರಪಿ ಮೂಲಕ 10 ದಿನಗಳಲ್ಲಿ 4-5 ಕೆ.ಜಿ ತೂಕ ಇಳಿಸಿಕೊಳ್ಳಬಹುದು. ವ್ಯಕ್ತಿಗಳ ಆಹಾರ ವಿಧಾನ ಹಾಗೂ ಮಲಗುವ ಸಮಯ ಬೇರೆ ಬೇರೆಯಾಗಿರುವುದರಿಂದ ಫಲಿತಾಂಶ ಕೂಡ ಭಿನ್ನವಾಗಿರುತ್ತದೆ.

ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಬಿದ್ದಾಗ ದೇಹದ ಅಂಗಗಳು ಸರಿಯಾಗಿ ಕೆಲಸ ಮಾಡುತ್ತವೆ. ಇದರಿಂದ ಜೀರ್ಣಕ್ರಿಯೆ ಕೂಡ ಸರಿಯಾಗಾಗುತ್ತದೆ. ಚಯಾಪಚಯ ಸರಿಯಾದಲ್ಲಿ ತೂಕ ಕೂಡ ಕಡಿಮೆಯಾಗುತ್ತದೆ.

ನೀರು ಕುಡಿಯುವ ವಿಧಾನ :

ಟೀ ಅಥವಾ ಕಾಫಿ ಕುಡಿಯುವ ಮುನ್ನ ನೀರನ್ನು ಕುಡಿಯಿರಿ.

ಎದ್ದ 1-2 ಗಂಟೆ ನಂತ್ರ, ಉಪಹಾರ ಸೇವನೆಗೆ ಮೊದಲು ಹಾಗೂ ನಂತ್ರ ಒಂದು ಗ್ಲಾಸ್ ನೀರು ಕುಡಿಯಿರಿ.

ಊಟಕ್ಕಿಂತ 20 ನಿಮಿಷ ಮೊದಲು ಒಂದು ಗ್ಲಾಸ್ ನೀರು ಕುಡಿಯಿರಿ. ದಿನದಲ್ಲಿ ಕನಿಷ್ಠ 9, 10 ಬಾರಿ ನೀರನ್ನು ಕುಡಿಯಲು ಮರೆಯಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read