ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ಅಭಿನಯಿಸಿರುವ ‘ಕೇದಾರ್ ನಾಥ್ ಕುರಿ ಫಾರಂ’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದ್ದು, ನಟ ಲೂಸ್ ಮಾದ ಯೋಗಿ ಅವರ ಕೈಯಲ್ಲಿ ಈ ಟೀಸರನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಕುರಿತು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಶ್ರೀನಿವಾಸ್ ಸಾಗರ್ ನಿರ್ದೇಶನದ ಈ ಚಿತ್ರದಲ್ಲಿ ಮಡೆನೂರ್ ಮನು ಸೇರಿದಂತೆ ಟೆನ್ನಿಸ್ ಕೃಷ್ಣ, ಕರಿಸುಬ್ಬು, ಶಿವಾನಿ, ಸುನಂದಾ, ಮುತ್ತುರಾಜ್ ಬಣ್ಣ ಹಚ್ಚಿದ್ದಾರೆ. ಸನ್ನಿ ಡಾನ್ ಅಬ್ರಹಾಂ ಸಂಗೀತ ಸಂಯೋಜನೆ ನೀಡಿದ್ದು, ಕೆಎಂ ಪ್ರಕಾಶ್ ಸಂಕಲನ, ರಾಜೇಶ್ ಸಾಲುಂಡಿ ಅವರ ಸಂಭಾಷಣೆ, ಹಾಗೂ ರಾಕೇಶ್ ತಿಲಕ್ ಛಾಯಾಗ್ರಹಣವಿದೆ.
https://twitter.com/A2MusicSouth/status/1831971474225467688