ಕಿರಣ್ ಸುಬ್ರಮಣಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ಸಿ ಚಿತ್ರದ ಎ ಅಲ್ಲ ಬಿ ಅಲ್ಲ ಸಿ ಎಂಬ ಲಿರಿಕಲ್ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದ್ದು ನಟ ಲೂಸ್ ಮಾದ ಈ ಹಾಡನ್ನು ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಎಜಿಎಸ್ ಕ್ರಿಯೇಶನ್ ಬ್ಯಾನರ್ ನಲ್ಲಿ ಎ ಜಿ ಸುಬ್ರಮಣಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಕಿರಣ್ ಸುಬ್ರಮಣಿ ಸೇರಿದಂತೆ ಸಾನ್ವಿ , ಪ್ರಶಾಂತ್ ನಟನಾ, ಶ್ರೀಧರ್ ರಾಮ್, ಆರ್ಯ, ಮಜಾಭಾರತ್ ಪಾಟೀಲ್, ಮಧುಮಿತಾ, ಚೈತ್ರ, ನಿರ್ಮಲ ನಾದನ್ ತೆರೆ ಹಂಚಿಕೊಂಡಿದ್ದಾರೆ. ನವೀನ್ ಸುಂದರ್ ರಾವ್ ಸಂಕಲನ, ನವೀನ್ ಸೂರ್ಯ ಮತ್ತು ವೀರೇಶ್ ಕುಮಾರ್ ಛಾಯಾಗ್ರಹಣ, ಗೀತಾ ನೃತ್ಯ ನಿರ್ದೇಶನ, ಹಾಗೂ ಶಿವು ಎಸ್ ಸಾಹಸ ನಿರ್ದೇಶನವಿದೆ ಎಬಿ ಮುರಳಿಧರನ್ ಸಂಗೀತ ಸಂಯೋಜನೆ ನೀಡಿದ್ದಾರೆ.
Get ready! Loose Mada Yogesh is releasing the lyrical video for "Alla B Alla C" tomorrow at 6:30 PM on A2 Music! Tune in and experience the magic!
#LooseMadaYogesh #AllaBAllaC #A2Music #KannadaSongs pic.twitter.com/tYBxJG2esn
— A2 Music (@A2MusicSouth) August 2, 2024