6ನೇ ಹಂತದ ಲೋಕಸಭೆ ಚುನಾವಣೆಗೆ ಇಂದು ಮತದಾನ: ಮೆಹಬೂಬಾ ಮುಫ್ತಿ, ಮನೇಕಾ ಗಾಂಧಿ, ಮನೋಜ್ ತಿವಾರಿ, ಕನ್ಹಯ್ಯಾ ಕುಮಾರ್ ಭವಿಷ್ಯ ನಿರ್ಧಾರ

ನವದೆಹಲಿ: ಲೋಕಸಭೆಯ ಆರನೇ ಹಂತದ ಚುನಾವಣೆ ಇಂದು ನಡೆಯಲಿದ್ದು, ಆರನೇ ಹಂತದಲ್ಲಿ ಆರು ರಾಜ್ಯ, ದೆಹಲಿ ಸೇರಿ 2 ಕೇಂದ್ರಾಡಳಿತ ಪ್ರದೇಶಗಳ 58 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

889 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದೇ ವೇಳೆ ಒಡಿಶಾ ವಿಧಾನಸಭೆಯ 42 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಆರನೇ ಹಂತದಲ್ಲಿ 11.13 ಕೋಟಿ ಮತದಾರರಿದ್ದು, 1.4 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 5.84 ಕೋಟಿ ಪುರುಷ ಮತದಾರರು, 5.29 ಕೋಟಿ ಮಹಿಳಾ ಮತದಾರರು 5120 ತೃತೀಯಲಿಂಗಿ ಮತದಾರರಿದ್ದಾರೆ.

ಆರನೇ ಹಂತ ಮುಕ್ತಾಯಗೊಂಡಲ್ಲಿ ಮತ್ತೊಂದು ಹಂತದ ಚುನಾವಣೆ ಮಾತ್ರ ಬಾಕಿ ಉಳಿದಿದ್ದು, ಜೂನ್ 1ರಂದು 7ನೇ ಹಾಗೂ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಜೂನ್ 4ರಂದು ಎಲ್ಲಾ 7 ಹಂತಗಳ ಫಲಿತಾಂಶ ಪ್ರಕಟವಾಗಲಿದೆ.

ಬಿಹಾರದ 8, ಉತ್ತರ ಪ್ರದೇಶದ 14, ಒಡಿಶಾ 6, ಪಶ್ಚಿಮ ಬಂಗಾಳ 8, ಜಾರ್ಖಂಡ್ 4, ದೆಹಲಿಯ 7, ಹರಿಯಾಣದ 10, ಜಮ್ಮು ಮತ್ತು ಕಾಶ್ಮೀರದ 1 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ, ಮನೇಕಾ ಗಾಂಧಿ, ಮೆಹಬೂಬಾ ಮುಫ್ತಿ, ಸಂಬಿತ್ ಪಾತ್ರ, ಅಭಿಜಿತ್ ಗಂಗೂಲಿ, ಕನ್ಹಯ್ಯಾ ಕುಮಾರ್,  ಬಾನ್ಸುರಿ ಸ್ವರಾಜ್ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ಇಂದು ನಿರ್ಧಾರವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read