ಕಾರವಾರ: ಗುತ್ತಿಗೆದಾರರನಿಂದ ಲಂಚ ಪಡೆಯುತ್ತುದ್ದಾಗಲೇ ಜಿಲ್ಲಾಸ್ಪತ್ರೆ ಸರ್ಜನ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಡಾ.ಶಿವಾನಂದ ಕಡ್ತಲಕರ ಲೋಕಾಯುಕ್ತ ಬಲೆಗೆ ಬಿದ್ದ ಉತ್ತರ ಕನ್ನಡ ಜಿಲ್ಲಾಸ್ಪತ್ರೆಯ ಸರ್ಜನ್. ಮೌಸಿಮ್ ಅಹ್ಮದ್ ಶೇಖ್ ಎಂಬ ಗುತ್ತಿಗೆದಾರನ ಬಳಿ ಲಂಚಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ದಾಳಿ ನಡೆದಿದೆ.
8 ತಿಂಗಳ ಹಿಂದೆ ಗುತ್ತಿಗೆದಾರ ಮೌಸಿಮ್ 3.5 ಲಕ್ಷ ರೂಪಾಯಿಗೆ ರೋಗಿಗಳ ಹಾಸಿಗೆ ಟೆಂಡರ್ ಪಡೆದಿದ್ದರು. 3.5 ಲಕ್ಷ ಹಣ ಬಿಡುಗಡೆಗೆ ಸರ್ಜನ್ 75 ಸಾವಿರ ರೂಪಾಯಿ ಕಮಿಷನ್ ಕೇಳಿದ್ದಾರೆ. ಈ ಪೈಕಿ ನಿನ್ನೆ 20 ಸಾವಿರ ರೂಪಾಯಿ ಲಂಚದ ಹಣವನ್ನು ಡಾ. ಶಿವಾನಂದ್ ಪಡೆದಿದ್ದರು. ಇಂದು 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಡಿವ್ಯ ಎಸ್ ಪಿ ದಿವ್ಯಾ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಡಾ.ಶಿವಾನಂದ್ ಅವರನ್ನು ವಶಕ್ಕೆ ಪಡೆಯಲಾಗಿದೆ.