ಬೆಳಗಾವಿ: ಕೇಸ್ ನ್ಯಾಯಾಲಯದ ಮೆಟ್ಟಿಲೇರದಂತೆ ತಡೆಯಲು 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ನಿಪ್ಪಾಣಿ ವೃತ್ತದ ಕಾರ್ಮಿಕ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಿಪ್ಪಾಣಿ ವೃತ್ತದ ಕಾರ್ಮಿಕ ನಿರೀಕ್ಷಕ ನಾಗಪ್ಪ ಯಲ್ಲಪ್ಪ ಕಳಸಣ್ಣವರ ಲೋಕಾಯುಕ್ತ ಬಲೆಗೆ ಬಿದ್ದವರು. ಮಹಾರಾಷ್ಟ್ರದ ಇಚಲಕರಂಚಿಯ ನಿವಾಸಿ ರಾಜು ಎನ್ನುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ರಾಜು ಎಂಬುವವರು ನಿಪ್ಪಾಣಿಯ ಬೋರಗಾಂವ ಗ್ರಾಮದ ಬಳಿ ಆರ್.ಪಿ.ಪ್ರೊಡಕ್ಷನ್ ಕಾರ್ಖಾನೆ ತೆರೆದಿದ್ದಾರು. ಆರೋಪಿ ನಾಗಪ್ಪ ಇದನ್ನು ತಪಾಸಣೆ ಮಾಡಿ ಕಾರಣ ಕೇಳಿ ಪೋಸ್ಟ್ ಮೂಲಕ ನೋಟಿಸ್ ನೀಡಿದ್ದರು. ಈ ನೋಟಿಸ್ ಹಿಂದಕ್ಕೆ ಪಡೆದು ಪ್ರಕರಣ ರದ್ದು ಮಾಡಿ, ನ್ಯಾಯಾಲಯದ ಮೆಟ್ಟಿಲು ಏರದಂತೆ ತಡೆಯಲು 10 ಸಾವಿರ ಲಂಚಕ್ಕೆ ಬೇದಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಸಧ್ಯ ಅಧಿಕಾರಿ ನಾಗಪ್ಪ ಅವರನ್ನು ವಶಕ್ಕೆ ಪಡೆದ ಲೋಕಾಯಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.