ಲೋಕಾಯುಕ್ತ, RTI ಧೈರ್ಯವಾಗಿ ಎದುರಿಸಿ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಸಲಹೆ

ಶಿವಮೊಗ್ಗ: ಲೋಕಾಯುಕ್ತ ಅಥವಾ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳು ಒಳಗೊಂಡಂತೆ ಯಾವುದೇ ಒತ್ತಡಕ್ಕೆ ಒಳಗಾಗದೆ ಧೈರ್ಯವಾಗಿ ಎದುರಿಸಬೇಕು ಎಂದು ಪಿಡಿಒಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸಲಹೆ ನೀಡಿದ್ದಾರೆ.

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಮತ್ತು ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಸಂದರ್ಭಗಳಲ್ಲಿ ಸ್ಥಳೀಯರು ಅಥವಾ ಗ್ರಾಪಂ ಸದಸ್ಯರಿಂದಲೇ ಪಿಡಿಒಗಳ ಮೇಲೆ ಒತ್ತಡ ಬರುವುದು ಸಾಮಾನ್ಯ. ಒತ್ತಡಗಳಿಗೆ ಮಣಿಯದೆ ಧೈರ್ಯದಿಂದ ಎದುರಿಸುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು. ಹಿಂದೆ ಪಿಡಿಒಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಮಾನಸಿಕ ಕಿರುಕುಳ ನೀಡಲಾಗುತ್ತಿದ್ದು, ಇದರಿಂದಾಗಿ ಪಿಡಿಓಗಳು ಆತ್ಮಹತ್ಯೆ, ವರ್ಗಾವಣೆ, ಬೇರೆ ಇಲಾಖೆಗೆ ನಿಯೋಜನೆ, ಸ್ವಯಂ ನಿವೃತ್ತಿಯಂತಹ ನಿರ್ಧಾರ ಕೈಗೊಳ್ಳುತ್ತಿದ್ದರು. ಇಂದು ಬದಲಾಗಿದ್ದು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾರೆ ಎಂದರು.

ಅನಾಮಧೇಯ ದೂರುಗಳು ಬಂದಾಗ ಸರ್ಕಾರಿ ನೌಕರರ ಆತ್ಮಸ್ಥೈರ್ಯ ಕುಗ್ಗುತ್ತಿದ್ದು, ಅದನ್ನು ಮನಗಂಡು ಕಳೆದ ಸರ್ಕಾರದ ಅವಧಿಯಲ್ಲಿ ಅನಾಮಧೇಯ ದೂರುಗಳು ಬಂದರೆ ತನಿಖೆ ನಡೆಸದಂತೆ ಆದೇಶ ಮಾಡಲಾಗಿತ್ತು. ನನ್ನ ಮೇಲೆಯೂ 500ಕ್ಕೂ ಅಧಿಕ ಆರ್.ಟಿ.ಐ. ಅರ್ಜಿಗಳು, 8 ಲೋಕಾಯುಕ್ತ ಪ್ರಕರಣಗಳು ಇವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read