BIG NEWS: ಲೋಕಸಭಾ ಚುನಾವಣೆ: ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಲಿ? ಎಂದ ಸಂಸದೆ ಸುಮಲತಾ

ಮಂಡ್ಯ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಂಪಿ ಟಿಕೆಟ್ ವಿಚಾರವಾಗಿ ಸಂಸದೆ ಸುಮಲತಾ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಚುನಾವಣಾ ಟಿಕೆಟ್ ವಿಚಾರವಾಗಿ ಸರಿಯಾದ ಸಮಯ, ಸಂದರ್ಭ ನೋಡಿಕೊಂಡು ಅಂತಿಮವಾದಾಗ ಹೇಳುತ್ತೇನೆ ಎಂದಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ಚುನಾವಣೆ ವಿಚಾರವಾಗಿ ಈಗ ನಾನು ಏನೂ ಮಾತನಾಡಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಸೀಟು ಹಂಚಿಕೆ ಇನ್ನೂ ಫೈನಲ್ ಆಗಿಲ್ಲ. ಅಂತಿಮವಾಗದೇ ನಾನು ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಮಂಡ್ಯ ಜನರು ನನ್ನ ಜೊತೆ ಇದ್ದಾರೆ. ಅಂಬರೀಶ್ ಅಭಿಮಾನಿಗಳು, ಫಾಲೋವರ್ಸ್ ಗಳು ನನ್ನೊಂದಿಗಿದ್ದಾರೆ. ನಾನು ಈವರೆಗೂ ಯಾರ ಬಳಿ ಹೊಗಿಯೂ ಟಿಕೆಟ್ ಕೇಳಿಲ್ಲ. ನನಗೆ ಎಂಪಿ ಸ್ಥಾನ ಇಲ್ಲದಿದ್ದಾಗಲೇ ಪಕ್ಷಗಳ ಆಫರ್ ನಾನು ಸ್ವೀಕರಿಸಲಿಲ್ಲ. ಸಧ್ಯ ಎಂಪಿ ಆಗಿದ್ದೀನಿ. ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಲಿ? ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read